August 29, 2026
Saturday, August 29, 2026
spot_img

ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಿತೀಶ್‌ ಕುಮಾರ್‌ ಪುತ್ರ: ನಿಶಾಂತ್‌ ನಾಳೆ ಜೆಡಿಯುಗೆ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ನಾಳೆ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಹೊಸ ಸಚಿವ ಸಂಪುಟದಲ್ಲಿ ರಾಜ್ಯದ ಮುಂದಿನ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ತನಕ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸದಿದ್ದ ನಿಶಾಂತ್, ಈಗ ರಾಜ್ಯ ರಾಜಕೀಯಕ್ಕೆ ಸಂಪೂರ್ಣವಾಗಿ ಪ್ರವೇಶಿಸಲು ಸಿದ್ಧವಾಗಿರುವ ಸೂಚನೆಗಳನ್ನು ನೀಡಿದ್ದಾರೆ.

ಸಂಜಯ್‌ ಕುಮಾರ್‌ ಜ್ಹಾ ನಿವಾಸನಡೆದ ಸಭೆಯಲ್ಲಿ ನಿಶಾಂತ್‌ ಭಾಗಿಯಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದವರು, ನಿಶಾಂತ್ ಅವರಿಗೆ ಪಕ್ಷದ ಸಂಘಟನೆಯಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಜೊತೆಗೆ, JD(U) ಕಚೇರಿಯ ಹೊರಗೆ ನಿಶಾಂತ್ ಅವರನ್ನು ಸ್ವಾಗತಿಸುವ ಪೋಸ್ಟರ್‌ಗಳು ಕೂಡ ಕಾಣಿಸಿವೆ.

ನಿಶಾಂತ್ ಮಾರ್ಚ್ 8ರಂದು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿ ಜೆಡಿಯು ಸೇರ್ಪಡೆಯಾಗಲಿದ್ದಾರೆ. ಅವರು ರಾಂಚಿಯ ಬಿರ್ಲಾ ಇನ್ಸ್ಟ್ ಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !