March 31, 2026
Tuesday, March 31, 2026
spot_img

ಮೋದಿ ಸ್ಟೇಡಿಯಂನಲ್ಲಿ ಮಹಾ ಫೈಟ್: ಕಿವೀಸ್ ವಿರುದ್ಧದ ಹಳೆ ಇತಿಹಾಸ ಬದಲಿಸುತ್ತಾ ಭಾರತ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಹೈವೋಲ್ಟೇಜ್ ಪಂದ್ಯ ನಡೆಯಲಿರುವ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್ ಸ್ನೇಹಿಯಾಗಿರಲಿದ್ದು, ರನ್ ಹೊಳೆ ಹರಿಯುವ ಸಾಧ್ಯತೆಯಿದೆ.

ಈ ಪಿಚ್ ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ ಕೂಡಿದೆ. ಇದು ಬ್ಯಾಟರ್‌ಗಳಿಗೆ ಹೆಚ್ಚಿನ ಪೂರಕವಾಗಿರಲಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಂತೆಯೇ ಉತ್ತಮ ಬೌನ್ಸ್ ನೀಡಲಿದೆ.

ಉತ್ತಮ ಬೌನ್ಸ್ ಇರುವುದರಿಂದ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಈ ಪಿಚ್ ಲಾಭದಾಯಕವಾಗಬಹುದು. ಬ್ಯಾಟಿಂಗ್‌ಗೆ ಹೇಳಿಮಾಡಿಸಿದಂತಿರುವ ಈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡ 200 ಪ್ಲಸ್ ರನ್ ಗಳಿಸಿದರೂ ಅಚ್ಚರಿಯಿಲ್ಲ.

ವಿಶ್ವಕಪ್ ಇತಿಹಾಸವನ್ನು ಗಮನಿಸಿದರೆ ನ್ಯೂಜಿಲೆಂಡ್ ವಿರುದ್ಧ ಭಾರತದ ದಾಖಲೆ ಅಷ್ಟೇನು ಆಶಾದಾಯಕವಾಗಿಲ್ಲ. ಈವರೆಗೆ ಟಿ20 ವಿಶ್ವಕಪ್‌ನಲ್ಲಿ ಈ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ನ್ಯೂಜಿಲೆಂಡ್ ಜಯಭೇರಿ ಬಾರಿಸಿದೆ.

2007: ನ್ಯೂಜಿಲೆಂಡ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ.

2016: ಭಾರತ ಕೇವಲ 79 ರನ್‌ಗಳಿಗೆ ಆಲೌಟ್ ಆಗುವ ಮೂಲಕ 47 ರನ್‌ಗಳ ಸೋಲು ಕಂಡಿತ್ತು.

2021: ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !