March 8, 2026
Sunday, March 8, 2026
spot_img

T20 ವಿಶ್ವಕಪ್ ಫೈನಲ್: ಗೆದ್ದವರಿಗೆಷ್ಟು? ಸೋತವರಿಗೆಷ್ಟು? ಬಹುಮಾನದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಟೂರ್ನಿಯ ರೋಚಕ ಪಯಣ ಈಗ ಅಂತಿಮ ಹಂತಕ್ಕೆ ತಲುಪಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಿರೀಟಕ್ಕಾಗಿ ಪೈಪೋಟಿ ನಡೆಸಲಿವೆ.

ಗ್ರೂಪ್ ಹಂತದಿಂದ ಆರಂಭಿಸಿ ಸೂಪರ್-8 ಹಾಗೂ ಸೆಮಿಫೈನಲ್ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಎರಡೂ ತಂಡಗಳು ಫೈನಲ್ ಪ್ರವೇಶಿಸಿವೆ. ಈ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡಕ್ಕೆ ಕೇವಲ ಟ್ರೋಫಿಯಷ್ಟೇ ಅಲ್ಲ, ಭಾರಿ ಮೊತ್ತದ ಬಹುಮಾನವೂ ಕಾದಿದೆ.

2026ರ ಟಿ20 ವಿಶ್ವಕಪ್‌ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಟ್ಟು 13.5 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ಘೋಷಿಸಿದೆ. ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 120 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಇದನ್ನೂ ಓದಿ:

ಫೈನಲ್‌ನಲ್ಲಿ ಜಯ ಸಾಧಿಸುವ ತಂಡಕ್ಕೆ 3 ಮಿಲಿಯನ್ ಡಾಲರ್ ಬಹುಮಾನ ದೊರೆಯಲಿದೆ. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 27.48 ಕೋಟಿ ರೂಪಾಯಿಗಳಿಗೆ ಸಮನಾಗುತ್ತದೆ. ಸೋತ ರನ್ನರ್-ಅಪ್ ತಂಡಕ್ಕೂ 1.6 ಮಿಲಿಯನ್ ಡಾಲರ್, ಅಂದರೆ ಅಂದಾಜು 14.65 ಕೋಟಿ ರೂಪಾಯಿ ಸಿಗಲಿದೆ.

ಸೆಮಿಫೈನಲ್ ಹಂತದಲ್ಲಿ ಸೋತ ತಂಡಗಳಿಗೆ ಸುಮಾರು 7.24 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ. ಸೂಪರ್-8 ಹಂತದಲ್ಲೇ ಹೊರಬಿದ್ದ ತಂಡಗಳಿಗೆ ಅಂದಾಜು 3.48 ಕೋಟಿ ರೂಪಾಯಿ ದೊರೆಯಲಿದೆ. ಗ್ರೂಪ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದ ತಂಡಗಳಿಗೆ ಸುಮಾರು 2.29 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

ಈ ಬಾರಿ ಐಸಿಸಿ ಬಹುಮಾನ ಮೊತ್ತವನ್ನು ಸುಮಾರು 20 ಶೇಕಡಾ ಹೆಚ್ಚಿಸಿದ್ದು, ಫೈನಲ್ ಪಂದ್ಯಕ್ಕೆ ಇನ್ನಷ್ಟು ಮಹತ್ವ ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !