ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ರೀತಿ ಬ್ಯೂಟಿಫುಲ್ ಆಗಿ ಪ್ರಪೋಸ್ ಮಾಡಿದ್ರೆ ಯಾವ ಹುಡುಗಿ ತಾನೆ ನೋ ಅಂತಾಳೆ ಹೇಳಿ? ಪ್ರಿಯಕರನೊಬ್ಬ ತನ್ನ ಹುಡುಗಿಯನ್ನು ಮದುವೆಗೆ ಒಪ್ಪಿಸೋಕೆ ಕುಟುಂಬ ಸಮೇತರಾಗಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಟ್ರೆಂಡ್ ಆಗಿದೆ..
ಪ್ರಿಯಕರ ತನ್ನ ಪ್ರೇಯಸಿಯ ಮನೆಯ ಕೆಳಗೆ ನಿಂತು ಡ್ಯಾನ್ಸ್ ಮಾಡಿದ್ದಾನೆ. ಫ್ಯಾಮಿಲಿ ಹಾಗೂ ಸ್ನೇಹಿತರ ಜತೆ ತೆನು ಲೇಕೆ ಮೇ ಜಾವಂಗಾ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ದೃಶ್ಯವನ್ನು ಬಾಲ್ಕನಿಯಿಂದ ನೋಡುತ್ತಿರುವ ಯುವತಿ, ಈ ಭರ್ಜರಿ ಸರ್ಪ್ರೈಸ್ ನೋಡಿ ಆಶ್ಚರ್ಯಗೊಂಡಿದ್ದಾರೆ.
ಡ್ಯಾನ್ಸ್ ಮುಗಿದ ನಂತರ ಯುವಕ ಆಕೆಗೆ ಪ್ರಪೋಸ್ ಮಾಡಿದ್ದು, ಯುವತಿ ಕೂಡ ಒಪ್ಪಿಗೆ ನೀಡಿದ್ದಾರೆ. ಬರೀ ಹಣದಿಂದ ನೀಡುವ ಸರ್ಪ್ರೈಸ್ ಕ್ಷಣಿಕ ಖುಷಿ ನೀಡುತ್ತದೆ. ಆದರೆ ಮನಸ್ಸಿನಿಂದ ನೀಡುವ ಈ ರೀತಿ ಸರ್ಪ್ರೈಸ್ ಸದಾ ಇರುತ್ತದೆ ಎಂದು ನೆಟ್ಟಿಗರು ಹೇಳ್ತಿದ್ದಾರೆ.



