April 26, 2026
Sunday, April 26, 2026
spot_img

PEACE | ಮನೆಯಲ್ಲಿ ಶಾಂತಿ ಕಾಪಾಡೋಕೆ ಬೆಡ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ

ಎಲ್ಲಾ ಸರಿಯಿದೆ, ಅಂದ್ರೆ ಕೆಲಸದಲ್ಲಿ ಸಮಸ್ಯೆ ಇಲ್ಲ, ದಂಪತಿಯಲ್ಲಿ ಜಗಳ ಇಲ್ಲ, ಮನೆಯವರಲ್ಲಿ ಮುನಿಸು ಇಲ್ಲ, ಮಕ್ಕಳಿಂದ ಸಮಸ್ಯೆ ಇಲ್ಲ. ಆದರೂ ಮನೆಯಲ್ಲಿ ನೆಮ್ಮದಿ ಇಲ್ಲ, ಏನೋ ಖಾಲಿ ಖಾಲಿ ಇರುವಂತೆ ಭಾಸವಾಗುತ್ತದೆ ಎಂದಾದರೆ ಬೆಡ್‌ರೂಮ್‌ನಲ್ಲಿ ಈ ಬದಲಾವಣೆಗಳನ್ನು ಮಾಡಿನೋಡಿ..

ಬೆಡ್‌ರೂಮ್‌ನಲ್ಲಿ ಕನ್ನಡಿ ಇದ್ದೇ ಇರುತ್ತದೆ. ಆದರೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ನೀವು ನೋಡಿಕೊಳ್ಳಬೇಡಿ. ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಬಿಂಬ ಕಾಣದ ಜಾಗಕ್ಕೆ ಕನ್ನಡಿಯನ್ನು ಇಡಿ.

ಬೆಡ್‌ರೂಮ್‌ನಲ್ಲಿ ಗಡಿಯಾರ ಇರೋದು ಕೂಡ ಸಾಮಾನ್ಯವೇ. ಎದ್ದ ತಕ್ಷಣ ಟೈಮ್‌ ನೋಡಬೇಡಿ. ಮಧ್ಯರಾತ್ರಿ ಎದ್ದಾಗ ಕೂಡ ಟೈಮ್‌ನೋಡಬೇಡಿ. ಹಾಸಿಗೆಯ ಎದುರು ಗಡಿಯಾರ ಇರೋದು ಬೇಡ. ನಿಮಗೆ ಟೈಮ್‌ ನೋಡಬೇಕು ಅಂದಾಗ ನೋಡಿ, ನೋಡೋಕೆ ಇಷ್ಟವಿಲ್ಲದಿದ್ದಾಗ ನಿಮಗೆ ಕಾಣುವ ಜಾಗದಲ್ಲಿ ಗಡಿಯಾರ ಬೇಡ.

ಬೆಡ್‌ರೂಮ್‌ನಲ್ಲಿ ಯಾವುದೇ ಪ್ರಾಣಿ ಅಥವಾ ಪಕ್ಷಿ ಚಿತ್ರ, ಸ್ಟಿಕ್ಕರ್‌, ಮೂರ್ತಿ ಏನನ್ನೂ ಇಡಬೇಡಿ. ನವಿಲುಗರಿ ಇಷ್ಟವಿದ್ರೆ ಇಡಬಹುದು.

ದಂಪತಿಯ ರೂಮ್‌ನಲ್ಲಿ ದೇವರ ಫೋಟೊ ಇಡಬೇಡಿ. ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳನ್ನೇ ನೋಡಿಕೊಂಡು ನಮಸ್ಕರಿಸಿ ಎದ್ದೇಳಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !