October 16, 2026
Friday, October 16, 2026
spot_img

ಪೂರಿ, ದೋಸೆ ಅಷ್ಟೇ ಅಲ್ಲ, ಇನ್ಮುಂದೆ ಬಜ್ಜಿ ಬೋಂಡದ ಸಣ್ಣ ಅಂಗಡಿಗಳೂ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಹೊಟೇಲ್‌ ಉದ್ಯಮ ಕಂಗಾಲಾಗಿದೆ. ಹೊಟೇಲ್‌ಗಳಲ್ಲಿ ಈಗಾಗಲೇ ವಡೆ, ದೋಸೆ, ಪೂರಿಯಂಥ ಪದಾರ್ಥಗಳ ತಯಾರಿಕೆ ನಿಲ್ಲಿಸಲಾಗಿದೆ.

ಸಂಜೆಯ ಸ್ನಾಕ್ಸ್‌ ಎಂದೇ ಫೇಮಸ್‌ ಆದ ಬಜ್ಜಿ, ಬೋಂಡ, ಸಮೋಸ, ಪಕೋಡ ಇನ್ನಿತರ ತಿಂಡಿಗಳು ಲಭ್ಯವಿರೋದಿಲ್ಲ. ಹೆಚ್ಚು ಎಣ್ಣೆ ಹಾಗೂ ಗ್ಯಾಸ್‌ ಬಳಕೆ ಆಗುವ ಪದಾರ್ಥಗಳನ್ನು ಮಾಡಲಾಗುವುದಿಲ್ಲ ಎಂದು ಹೊಟೇಲ್‌ಗಳು ಹೇಳಿವೆ.

ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಉರಿ ಬೇಕಾಗುತ್ತದೆ, ಇದು ಸಿಲಿಂಡರ್ ಶೀಘ್ರವಾಗಿ ಖಾಲಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಸ್ನ್ಯಾಕ್ಸ್ ವಿಭಾಗಕ್ಕೆ ಹೋಟೆಲ್‌ಗಳು ಗುಡ್‌ಬೈ ಹೇಳಿವೆ. ಇದರಿಂದ ಹೋಟೆಲ್‌ಗಳ ಒಟ್ಟಾರೆ ಆದಾಯದಲ್ಲಿ ಶೇ. 30 ರಿಂದ 40 ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಡೆ, ಬಜ್ಜಿ, ಪಕೋಡ ಮತ್ತು ಗೋಬಿಯಂತಹ ಸ್ನ್ಯಾಕ್ಸ್ ಐಟಂಗಳು ಹೋಟೆಲ್‌ಗಳಿಗೆ ಹೆಚ್ಚು ಲಾಭ ತಂದುಕೊಡುವ ಪದಾರ್ಥಗಳು. ಇವುಗಳ ಮಾರಾಟ ನಿಂತರೆ ಲಾಭದ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ.ಬೆಳಗ್ಗಿನ ಉಪಹಾರಕ್ಕೆ ವಡೆ-ಪೂರಿ ಇಲ್ಲದಿದ್ದರೆ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಬಜ್ಜಿ-ಬೋಂಡಾ ಸಿಗದಿದ್ದರೆ ಗ್ರಾಹಕರು ಹೋಟೆಲ್‌ಗೆ ಬರುವುದು ಕಡಿಮೆಯಾಗುತ್ತದೆ. ಇದರಿಂದ ಹೊಟೇಲ್‌ ಉದ್ಯಮದಲ್ಲಿ ಭಾರೀ ಸಮಸ್ಯೆ ಎದುರಾಗಲಿದೆ.

Must Read