ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಿಂದ ಥೈಲ್ಯಾಂಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಲ್ಲಿ ಲ್ಯಾಂಡಿಂಗ್ ವೇಳೆ ನೋಸ್ ವೀಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರೀ ದುರಂತದಿಂದ ಪಾರಾಗಿದೆ.
ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಠಿಣ ಲ್ಯಾಂಡಿಂಗ್ ನಡೆಸಿದೆ. ಪರಿಣಾಮ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್‌ಗೆ ಹಾನಿಯಾಗಿದೆ. ಇದರಿಂದ ಅಧಿಕಾರಿಗಳು ರನ್‌ವೇ ಅನ್ನು ಸುಮಾರು ಆರು ಗಂಟೆಗಳ ಕಾಲ ಮುಚ್ಚಬೇಕಾಗಿದೆ. ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರು ಸೇಫ್ ಆಗಿದ್ದಾರೆ.
ವಿಮಾನ ಬೋಯಿಂಗ್ 737-ಮ್ಯಾಕ್ಸ್8 ಮಾದರಿಯದ್ದಾಗಿದೆ. ಮಾರ್ಚ್ 11 ರಂದು ಹೈದರಾಬಾದ್-ಫುಕೆಟ್ ವಿಮಾನವು ಲ್ಯಾಂಡಿಂಗ್ ವೇಳೆ ನೋಸ್ ವೀಲ್ ಸಮಸ್ಯೆಗೆ ಸಿಲುಕಿತು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ವಿಮಾನವು ಹೈದರಾಬಾದ್‌ನಿಂದ ಬೆಳಗ್ಗೆ 6:42ಕ್ಕೆ ಟೇಕ್ ಆಫ್ ಆಗಿ, ಸ್ಥಳೀಯ ಕಾಲಮಾನ ಬೆಳಗ್ಗೆ 11:40ಕ್ಕೆ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಸದ್ಯ ವಿಮಾನವು ರನ್‌ವೇಯಲ್ಲಿ ಸಿಲುಕಿಕೊಂಡಿದೆ. ಸಂಜೆವರೆಗೂ ರನ್‌ವೇ ಬಂದ್ ಆಗಿರಲಿದೆ. ಇದರಿಂದಾಗಿ ಹಲವು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.



