ಜಿಮ್‌ಗೆ ಹೋಗುವವರಲ್ಲಿ ಹಲವರಿಗೆ ಡೆಡ್ ಲಿಫ್ಟ್ ಫೇವರಿಟ್ ವ್ಯಾಯಾಮ. ಆದರೆ ಕೆಲವೊಮ್ಮೆ ಇದನ್ನೇ ಮಾಡಿದ ಬಳಿಕ ಬೆನ್ನು ನೋವು ಆಗಿರೋ ಅನುಭವವೂ ಆಗಿರಬಹುದು ಅಲ್ವಾ? ಹೆಚ್ಚು ತೂಕ ಎತ್ತುವುದು, ತಪ್ಪಾದ ಪೋಶ್ಚರ್ ಅಥವಾ ದೇಹವನ್ನು ಸರಿಯಾಗಿ ವಾರ್ಮ್ ಅಪ್ ಮಾಡದೇ ವ್ಯಾಯಾಮ ಮಾಡುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಚಿಂತಿಸೋ ಅಗತ್ಯ ಇಲ್ಲ. ಕೆಲವು ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಈ ಸಮಸ್ಯೆಯಿಂದ ಬೇಗ ರಿಲೀಫ್ ಪಡೆಯಬಹುದು.
ಡೆಡ್ ಲಿಫ್ಟ್ ಮಾಡಿದ ಬಳಿಕ ಬೆನ್ನು ಭಾಗವನ್ನು ಸಣ್ಣ ಸ್ಟ್ರೆಚಿಂಗ್ ಮೂಲಕ ರಿಲ್ಯಾಕ್ಸ್ ಮಾಡುವುದು ಬಹಳ ಮುಖ್ಯ. ಇದು ಸ್ನಾಯುಗಳಲ್ಲಿ ಬಂದಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೆಲ ನಿಮಿಷ ಐಸ್ ಪ್ಯಾಕ್ ಇಡುವುದರಿಂದ ಉಂಟಾಗುವ ನೋವು ಮತ್ತು ಊತ ಕಡಿಮೆಯಾಗುತ್ತದೆ. ವ್ಯಾಯಾಮ ಮಾಡುವಾಗ ದೇಹದ ಪೋಶ್ಚರ್ ಸರಿಯಾಗಿರಬೇಕು. ಬೆನ್ನು ನೇರವಾಗಿ ಇಟ್ಟುಕೊಂಡು ತೂಕ ಎತ್ತಿದರೆ ಬೆನ್ನಿನ ಮೇಲೆ ಅನಗತ್ಯ ಒತ್ತಡ ಬೀಳುವುದಿಲ್ಲ.
ಇದನ್ನೂ ಓದಿ:
ಅದೇ ರೀತಿ ದೇಹಕ್ಕೆ ವಿಶ್ರಾಂತಿ ನೀಡುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಮುಂದಿನ ವರ್ಕೌಟ್‌ಗೆ ಮೊದಲು ಸರಿಯಾಗಿ ವಾರ್ಮ್ ಅಪ್ ಮಾಡುವುದು ಕೂಡ ಬಹಳ ಮುಖ್ಯ. ಈ ಚಿಕ್ಕ ಚಿಕ್ಕ ಟ್ರಿಕ್ಸ್ ಪಾಲಿಸಿದ್ರೆ ಡೆಡ್ ಲಿಫ್ಟ್ ನಂತರದ ಬೆನ್ನು ನೋವು ಬೇಗ ಕಡಿಮೆಯಾಗುತ್ತದೆ.



