April 30, 2026
Thursday, April 30, 2026
spot_img

2010 ಲಾರ್ಡ್ಸ್ ಸ್ಪಾಟ್ ಫಿಕ್ಸಿಂಗ್ ರಹಸ್ಯ: ಮೊಬೈಲ್ ರಿಪೇರಿಯಿಂದ ಪಾಕ್ ಆಟಗಾರರ ಕಳ್ಳಾಟ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

2010ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಾಕಿಸ್ತಾನ–ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಕ್ರಿಕೆಟ್ ಲೋಕವನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಕುರಿತು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಇದೀಗ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಆಗಸ್ಟ್ 26, 2010ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಬಟ್, ವೇಗಿಗಳು ಮೊಹಮ್ಮದ್ ಅಮಿರ್ ಮತ್ತು ಮೊಹಮ್ಮದ್ ಆಸಿಫ್ ಸೇರಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಬುಕ್ಕಿ ಮಜರ್ ಮಜೀದ್ ನೀಡಿದ ಆಫರ್‌ಗೆ ಒಪ್ಪಿದ ಆಟಗಾರರು ಪಂದ್ಯದ ವೇಳೆ ಉದ್ದೇಶಪೂರ್ವಕವಾಗಿ ನೋ-ಬಾಲ್ ಎಸೆದಿದ್ದರು.

ಇದನ್ನೂ ಓದಿ:

ರಝಾಕ್ ಹೇಳುವಂತೆ, ಮಜರ್ ಮಜೀದ್ ತಮ್ಮ ಮೊಬೈಲ್ ಫೋನ್ ಅನ್ನು ಲಂಡನ್‌ನ ಮೊಬೈಲ್ ಶಾಪ್‌ನಲ್ಲಿ ರಿಪೇರಿಗೆ ನೀಡಿದ್ದರು. ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಝಾಕ್ ಸ್ನೇಹಿತನಿಗೆ ಆ ಫೋನ್‌ಗೆ ಬಂದ ಸಂದೇಶಗಳಲ್ಲಿ ಫಿಕ್ಸಿಂಗ್ ಕುರಿತು ಮಾಹಿತಿ ಕಂಡುಬಂದಿತ್ತು. ಈ ವಿಷಯವನ್ನು ಆತನಿಂದ ತಿಳಿದುಕೊಂಡ ರಝಾಕ್, ತಕ್ಷಣವೇ ತಂಡದ ಹಿರಿಯ ಆಟಗಾರ ಶಾಹಿದ್ ಅಫ್ರಿದಿಗೆ ಮಾಹಿತಿ ನೀಡಿದ್ದಾರೆ.

ನಂತರ ಅಫ್ರಿದಿ ಅಮಿರ್‌ನ್ನು ವಿಚಾರಿಸಿದಾಗ ಆರಂಭದಲ್ಲಿ ಅವನು ಮೌನವಾಗಿದ್ದರೂ ಕೊನೆಗೆ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ರಝಾಕ್ ಹೇಳಿದ್ದಾರೆ. ಈ ಪ್ರಕರಣದ ನಂತರ ಅಮಿರ್‌ಗೆ 5 ವರ್ಷ, ಆಸಿಫ್‌ಗೆ 7 ವರ್ಷ ಹಾಗೂ ಸಲ್ಮಾನ್ ಬಟ್‌ಗೆ 10 ವರ್ಷಗಳ ನಿಷೇಧ ವಿಧಿಸಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !