October 16, 2026
Friday, October 16, 2026
spot_img

ಅದ್ಭುತವಾಗಿ ಕಂಬ್ಯಾಕ್‌ ಮಾಡಿದ ನಟ ವಿಜಯ್‌ ದೇವರಕೊಂಡ, ರಣಬಾಲಿ ಸಿನಿಮಾ ಸೂಪರ್‌ ಎಂದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ರಣಬಾಲಿ ಸಿನಿಮಾ ರಿಲೀಸ್‌ ಆಗಿದ್ದು, ವಿಜಯ್‌ ನಟನೆಗೆ ಜನ ಮನಸೋತಿದ್ದಾರೆ. ವಿಜಯ್‌ ಅವರನ್ನು ನೋಡುತ್ತಿದ್ದರೆ ನಮ್ಮ ಪೂರ್ವಜರು ಹೀಗೇ ಇದ್ದರೇನೋ ಎನ್ನುವಂತೆ ಭಾಸವಾಗುತ್ತಿದೆ ಎಂದು ಅಭಿಮಾನಿಗಳು ಶ್ಲಾಘಿಸಿದ್ದಾರೆ.

ಹಾಲಿವುಡ್‌ ಸ್ಟಾರ್‌ ಅರ್ನಾಲ್ಡ್‌ ವೋಸ್ಲೋ ವಿಲನ್‌ ಪಾತ್ರದಲ್ಲಿ ನಟನೆ ಮಾಡಿದ್ದು, ಕಥೆ, ಸಿನಿಮಾಟೋಗ್ರಫಿ, ಕ್ಯಾರೆಕ್ಟರ್ಸ್‌ ಹಾಗೂ ಸ್ಟೋರಿ ಎಲ್ಲವೂ ಅದ್ಭುತವಾಗಿದೆ. ರಶ್ಮಿಕಾ ನಟನೆ ರಾಹು ನಿರ್ದೇಶನ, ಹಿನ್ನೆಲೆ ಸಂಗೀತ ಕೂಡ ಅದ್ಭುತವಾಗಿದ್ದು, ಈ ವರ್ಷದ ಬೆಸ್ಟ್‌ ಸಿನಿಮಾ ಎಂದು ಜನ ಕೊಂಡಾಡಿದ್ದಾರೆ.

ವಿಜಯ್‌ ಕೆಲ ಸಮಯದಿಂದ ಸ್ಟ್ರಾಂಗ್‌ ಆದ ಸಿನಿಮಾವನ್ನು ಮಾಡಿಯೇ ಇಲ್ಲ. ರಣಬಾಲಿ ಮೂಲಕ ಅವರು ಕಂಬ್ಯಾಕ್‌ ಮಾಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ನೋಡಿದ ಎಲ್ಲರೂ ಫಿಲಂನಲ್ಲಿರುವ ಎಲ್ಲ ಹಾಡುಗಳು, ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಸಿನಿಮಾವನ್ನು ನೆಕ್ಸ್ಟ್‌ ಲೆವೆಲ್‌ಗೆ ಕೊಂಡೊಯ್ದಿದೆ ಎಂದಿದ್ದಾರೆ.

ಕೆಲವರು ಮಾತ್ರ ಸಿನಿಮಾ ಆವರೇಜ್‌ ಆಗಿದೆ. ಎಲ್ಲವೂ ಚೆನ್ನಾಗಿದೆ ಆದರೆ ಕಥೆ ಔಟ್‌ಡೇಟೆಡ್‌. ವಿಜಯ್‌ ದೇವರಕೊಂಡ ಪಾತ್ರಕ್ಕೆ ಸೆಟ್‌ ಆಗೋದಿಲ್ಲ. ರಶ್ಮಿಕಾರನ್ನು ನೋಡಿ ನೆಮ್ಮದಿ ಆಯ್ತು ಅಷ್ಟೇ ಎಂದಿದ್ದಾರೆ.

Must Read