March 13, 2026
Friday, March 13, 2026
spot_img

FITNESS | ಡೈಲಿ ಸ್ಕ್ವಾಟ್ಸ್ ಮಾಡ್ತೀರಾ? ಅದ್ರಿಂದ ಏನೆಲ್ಲಾ ಲಾಭ ಇದೆ?

ಫಿಟ್ನೆಸ್ ಬಗ್ಗೆ ಹೆಚ್ಚು ಜನ ಗಮನ ಕೊಡುತ್ತಿರುವ ಇಂದಿನ ಕಾಲದಲ್ಲಿ ಸ್ಕ್ವಾಟ್ಸ್ ಎನ್ನುವ ವ್ಯಾಯಾಮ ಬಹಳ ಜನಪ್ರಿಯವಾಗಿದೆ. ಜಿಮ್‌ಗೆ ಹೋಗುವವರು ಮಾತ್ರವಲ್ಲದೆ ಮನೆಯಲ್ಲಿಯೇ ವ್ಯಾಯಾಮ ಮಾಡುವವರೂ ಕೂಡ ಸ್ಕ್ವಾಟ್ಸ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಸರಳವಾಗಿ ಕಾಣುವ ಈ ವ್ಯಾಯಾಮ ದೇಹದ ಹಲವು ಭಾಗಗಳಿಗೆ ಒಳ್ಳೆಯ ಪ್ರಯೋಜನ ನೀಡುತ್ತದೆ. ವಿಶೇಷವಾಗಿ ಕಾಲುಗಳು, ಹಿಪ್ಸ್ ಮತ್ತು ಕೋರ್ ಭಾಗವನ್ನು ಬಲಪಡಿಸಲು ಸ್ಕ್ವಾಟ್ಸ್ ಅತ್ಯಂತ ಪರಿಣಾಮಕಾರಿ ವ್ಯಾಯಾಮವೆಂದು ಪರಿಣಿತರು ಹೇಳುತ್ತಾರೆ.

ಕಾಲುಗಳ ಬಲ ಹೆಚ್ಚಿಸುತ್ತದೆ
ಸ್ಕ್ವಾಟ್ಸ್ ಮಾಡುವುದರಿಂದ ತೊಡೆ, ಮೊಣಕಾಲು ಮತ್ತು ಕಾಲಿನ ಸ್ನಾಯುಗಳು ಬಲವಾಗುತ್ತವೆ. ದೈನಂದಿನ ಚಲನವಲನಕ್ಕೂ ಇದು ಸಹಾಯ ಮಾಡುತ್ತದೆ.

ದೇಹದ ಸ್ಟ್ಯಾಮಿನಾ ಹೆಚ್ಚುತ್ತದೆ
ನಿಯಮಿತವಾಗಿ ಸ್ಕ್ವಾಟ್ಸ್ ಮಾಡಿದರೆ ದೇಹದ ಶಕ್ತಿ ಹೆಚ್ಚುತ್ತದೆ. ಇದರಿಂದ ಇತರೆ ವ್ಯಾಯಾಮಗಳನ್ನೂ ಸುಲಭವಾಗಿ ಮಾಡಬಹುದು.

ಕೊಬ್ಬು ಕಡಿಮೆ ಮಾಡಲು ಸಹಾಯ
ಸ್ಕ್ವಾಟ್ಸ್ ಮಾಡುವಾಗ ದೇಹದ ಹಲವಾರು ಸ್ನಾಯುಗಳು ಕೆಲಸ ಮಾಡುತ್ತವೆ. ಇದರಿಂದ ಕ್ಯಾಲೊರಿಗಳು ಹೆಚ್ಚು ಸುಡುತ್ತವೆ ಮತ್ತು ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ.

ಇದನ್ನೂ ಓದಿ:

ದೇಹದ ಸಮತೋಲನ ಸುಧಾರಣೆ
ಸ್ಕ್ವಾಟ್ಸ್ ದೇಹದ ಸಮತೋಲನ ಮತ್ತು ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸಲು ಸಹಾಯಕ.

ಕೋರ್ ಮಸಲ್ ಬಲವಾಗುತ್ತದೆ
ಈ ವ್ಯಾಯಾಮ ಹೊಟ್ಟೆ ಹಾಗೂ ಬೆನ್ನು ಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

ಪ್ರತಿದಿನ ಸರಿಯಾದ ವಿಧಾನದಲ್ಲಿ ಸ್ಕ್ವಾಟ್ಸ್ ಮಾಡುವುದರಿಂದ ದೇಹ ಆರೋಗ್ಯಕರವಾಗಿರುತ್ತದೆ. ಆದರೆ ಅತಿಯಾಗಿ ಮಾಡುವುದನ್ನು ತಪ್ಪಿಸಿ, ಸರಿಯಾದ ಪೋಸಿಷನ್‌ನಲ್ಲಿ ವ್ಯಾಯಾಮ ಮಾಡುವುದು ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !