March 13, 2026
Friday, March 13, 2026
spot_img

ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅವಕಾಶ: ಇರಾನ್ ರಾಯಭಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯ ಪ್ರಾಚ್ಯದಲ್ಲಿನ ಉದ್ವಿಗ್ನತೆ ನಡುವೆ ಭಾರತದಲ್ಲಿರುವ ಇರಾನ್‌ ರಾಯಭಾರಿ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದು, ಭಾರತದ ತೈಲ ಹೊತ್ತ ಟ್ಯಾಂಕರ್‌ ಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ಇರಾನ್ ಸಿದ್ಧವಾಗಿದೆ ಎಂದು ಹೇಳಿದೆ.

ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ , ಭಾರತ ನಮ್ಮ ಸ್ನೇಹಿತ. ಶೀಘ್ರದಲ್ಲೇ ಜಲಮಾರ್ಗದ ಮೂಲಕ ಭಾರತದ ಪ್ರವೇಶವನ್ನು ಖಚಿತಪಡಿಸುವ ಬೆಳವಣಿಗೆಗಳು ಹೊರಹೊಮ್ಮಬಹುದು ಎಂದು ತಿಳಿಸಿದರು.

ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಸಾಧ್ಯವಾಗುತ್ತದೆಯೇ ಎಂದು ನೇರವಾಗಿ ಕೇಳಿದಾಗ, ಇನ್ನೆರಡು ಅಥವಾ ಮೂರು ಗಂಟೆಗಳಲ್ಲಿ ನೀವೇ ಅದನ್ನು ನೋಡಲಿದ್ದೀರಿ ಎಂದು ಪ್ರತಿಕ್ರಿಯಿಸಿದರು.

ಭಾರತ ಸರ್ಕಾರವು ಹಲವು ಸಂದರ್ಭಗಳಲ್ಲಿ ಇರಾನ್‌ಗೆ ಸಹಾಯ ಮಾಡಿದೆ ಮತ್ತು ಇರಾನ್ ಭಾರತದೊಂದಿಗೆ ಸಹಕರಿಸಬೇಕು . ಎರಡು ಸರ್ಕಾರಗಳ ನಡುವೆ ಹೆಚ್ಚಿನ ಸಹಕಾರಕ್ಕೆ ದಾರಿ ಮಾಡಿಕೊಡುವಂತೆ ಹಿರಿಯ ಇರಾನಿನ ಅಧಿಕಾರಿಗಳು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !