September 22, 2026
Tuesday, September 22, 2026
spot_img

ಬರೀ 9 ರೂಪಾಯಿ ಸಾಲಕ್ಕೆ ಬೆನ್ನುಬಿದ್ದ ಬ್ಯಾಂಕ್‌! ದುಡ್ಡು ಕಟ್ಟಿ ಬ್ಯಾಂಕ್‌ನಿಂದ 66 ಪೈಸೆ ಅಕೌಂಟ್‌ಗೆ ಹಾಕಿಸಿಕೊಂಡ ರೈತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಕಲೇಶಪುರದ ಕೆನರಾ ಬ್ಯಾಂಕ್‌ ರೈತನೊಬ್ಬನ ಖಾತೆಗೆ 66 ಪೈಸೆಯನ್ನು ಜಮೆ ಮಾಡಿದೆ!

ಹೌದು, ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಕೆನರಾ ಬ್ಯಾಂಕ್‌ನಲ್ಲಿ ಹೋದ ವರ್ಷ ಐವತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದರು. ಬಡ್ಡಿ ಜೊತೆ ಎಲ್ಲವನ್ನೂ ತೀರಿಸಿದ್ದರು.

ಆದರೆ ಬ್ಯಾಂಕ್‌ನವರು ಫೋನ್‌ ಮಾಡಿ ಒಂಬತ್ತು ರೂಪಾಯಿ 34 ಪೈಸೆಯನ್ನು ಪಾವತಿಸಬೇಕೆಂದು ಹೇಳಿದ್ದರು. ಅಷ್ಟು ಸಾಲ ತೀರಿಸಿದ ರೈತನಿಗೆ ಪದೇ ಪದೆ ಕರೆ ಮಾಡಿ ಒಂಬತ್ತು ರೂಪಾಯಿ ಸಾಲ ತೀರಿಸಿ ಎಂದು ಹೇಳುತ್ತಿದ್ದರು.

ರೈತ ಚೊಕ್ಕಣ್ಣಗೌಡ ಬ್ಯಾಂಕ್‌ಗೆ ಬಂದು 0 ರೂಪಾಯಿ ನೀಡಿ ಬಾಕಿ ಸಾಲವನ್ನು ಪಾವತಿಸಿದ್ದರು. ಬ್ಯಾಂಕ್‌ ಸಿಬ್ಬಂದಿ ಸಾಲದ ಮೊತ್ತದಲ್ಲಿ 9 ರೂಪಾಯಿ 34 ಪೈಸೆ ಮಾತ್ರ ಉಲ್ಲೇಖಿಸಿ ಬಾಕಿ 66 ಪೈಸೆಯನ್ನು ಉಳಿಸಿಕೊಂಡು ರಿಸಿಪ್ಟ್‌ ನೀಡಿದ್ದರು.

ರಿಸಿಪ್ಟ್‌ ನೋಡಿದ ಚೊಕ್ಕಣ್ಣ ಗೌಡ ನನ್ನ 66 ಪೈಸೆಯನ್ನು ವಾಪಾಸ್‌ ನೀಡಿ ಎಂದು ಕೇಳಿದ್ದರು. ಅದಕ್ಕೆ ಬ್ಯಾಂಕ್‌ ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಸುದ್ದಿ ಮಾಧ್ಯಮದವರೆಗೂ ಬಂದ ನಂತರ ಬ್ಯಾಂಕ್‌ ಚೊಕ್ಕಣ್ಣನ ಖಾತೆಗೆ 66 ಪೈಸೆ ಜಮಾ ಮಾಡಿದೆ.

ದೊಡ್ಡ ದೊಡ್ಡ ಕಳ್ಳರು ಹಣ ಪಡೆದು ಓಡಿದ್ದಾರೆ, ಎಷ್ಟೋ ವಿದ್ಯಾವಂತರು ಬ್ಯಾಂಕ್‌ಗೆ ಮೋಸ ಮಾಡಿದ್ದಾರೆ. ಆದರೆ ನಾವು ಬಡವರು, ರೈತರು ನಮಗೆ ಒಂಬತ್ತು ರೂಪಾಯಿಗಾಗಿ ಎಷ್ಟೆಲ್ಲಾ ತೊಂದರೆ ಕೊಟ್ಟಿದ್ದಾರೆ ಎಂದು ಚೊಕ್ಕಣ್ಣ ಗೌಡ ಗರಂ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !