ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆಯು ಮಾರ್ಚ್ ಅಂತ್ಯದ ವೇಳೆ ವಿಶೇಷ ಶ್ರೀ ರಾಮಾಯಾಣ ಯಾತ್ರಾ ಟೂರ್ ಘೋಷಿಸಿದೆ.
ಈ ಧಾರ್ಮಿಕ ಪ್ರವಾಸ ಮಾರ್ಚ್ 30 ರಿಂದ ಆರಂಭಗೊಳ್ಳಲಿದ್ದು, 16 ರಾತ್ರಿಗಳು, 17 ಹಗಲುಗಳ ಯಾತ್ರೆಯ ರೈಲು ರಾಮೇಶ್ವರಂ, ಅಯೋಧ್ಯೆ, ನಂದಿಗ್ರಾಮ, ಜನಕಪುರ, ಸೀತಾಮಾರ್ಹಿ, ಋಷಿಕೇಷ, ತಿರುಪತಿ, ಅಮೃತಸರದಾದ್ಯಂತ 17 ದಿನಗಳ ಕಾಲ ರೈಲು ಸಂಚರಿಸಲಿದೆ.
ಈ ವೇಳೆ ರಾಮಾಯಣ ಕಾಲದ ವಿಶೇಷ ಸ್ಥಳ, ದೇವಸ್ಥಾನ, ಪೌರಾಣಿಕ ಮಹತ್ವದ ಸ್ಥಳಗಳಿಗೆ ಭೇಟಿ, ದೇವಸ್ಥಾನ ದರುಶನ, ಪ್ರವಾಸಿ ತಾಣಗಳ ದರುಶನ ಪಡೆಯುವ ವಿಶೇಷ ಅವಕಾಶ ಸಿಗಲಿದೆ.
ಭಾರತ ಮತ್ತು ನೇಪಾಳದಾದ್ಯಂತ ಪ್ರಮುಖ ರಾಮಾಯಣ ತಾಣಗಳಲ್ಲಿ ಸಂಚರಿಸಲಿದ್ದು, ಸೀತಾ ಮಾ ಹುಟ್ಟೂರು, ಸೀತಾ ಮಾ ದೇವಸ್ಥಾನಗಳು ಕೂಡ ಸೇರಿದೆ.
ಈ ಯಾತ್ರೆ ದೆಹಲಿಯ ಸಫ್ಧರ್‌ಜಂಗ್ ರೈಲು ನಿಲ್ದಾಣದಿಂದ ಆರಂಭಗೊಳ್ಳಲಿದೆ. ಬಳಿಕ ಆಯೋಧ್ಯೆ ತಲುಪಲಿದೆ. ಅಲ್ಲಿಂದ ಶ್ರೀರಾಮಾಯಣದಲ್ಲಿ ಬರುವ ಎಲ್ಲಾ ಸ್ಥಳಗಳಿಗೆ ಈ ಯಾತ್ರೆ ಸಂದರ್ಶನ ನಡೆಸಲಿದೆ. ಒಟ್ಟು 7,560 ಕಿಲೋಮೀಟರ್ ಯಾತ್ರೆ ಇದಾಗಿದೆ. ಕರ್ನಾಟಕದ ಹಂಪಿ ಬಳಿ ಇರುವ ಹುಮಾನ್ ಹುಟ್ಟಿದ ಸ್ಥಳ ಅಂಜನಾದ್ರಿ ಬೆಟ್ಟ ಹಾಗೂ ದೇವಸ್ಥಾನ ದರುಶನವು ಈ ಯಾತ್ರೆಯಲ್ಲಿದೆ.
ರೈಲು ಟಿಕೆಟ್ ಬೆಲೆ 3AC 1,14,100 ರೂಪಾಯಿ, 2AC ಟಿಕೆಟ್ ದರ 1,51,225 ರೂಪಾಯಿ, 1AC ಟಿಕೆಟ್ ಬೆಲೆ 1,64,940 ರೂಪಾಯಿ. ಆಸನದ ಟಿಕೆಟ್ ಬೆಲೆ 1,11,630 ರೂಪಾಯಿ. ಇದರಲ್ಲಿ ಭಾರತೀಯ ರೈಲ್ವೇ ಪ್ರಯಾಣ, ಆಹಾರ, ವಸತಿ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಿದೆ.
ಸಂದರ್ಶನದ ಸ್ಥಳ: ಬುಕ್ಸರ್, ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ, ವಾರಣಾಸಿ, ತುಳಸಿ ಮಾನಸ ದೇವಸ್ಥಾನ, ಸಂಕಟ ಮೋಚನ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಗಂಗಾ ಆರತಿ, ಸೀತಾಮಾಯಿ, ಸೀತಾ ಸಮಾಹಿತ ಸ್ಥಳ (ಸೀತಾ ಮಾ ದೇವಸ್ಥಾನ), ಪ್ರಯಾಗರಾಜ್, ತ್ರೀವೇಣಿ ಸಂಗಮ, ಹನುಮಾನ ದೇವಸ್ಥಾನ,ಶ್ರಿಂಗವೇರಪುರ, ರಿಶಿ ದೇವಸ್ಥಾನ, ಚಿತ್ರಕೂಟ,ನಾಸಿಕ್,ಹಂಪಿ,ರಾಮೇಶ್ವರಂ.



