September 30, 2026
Wednesday, September 30, 2026
spot_img

ನೇಪಾಳದಲ್ಲಿ ಕಮರಿಗೆ ಉರುಳಿದ ಬಸ್: ಏಳು ಮಂದಿ ಭಾರತೀಯ ಯಾತ್ರಿಕರು ಸಾ*ವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ಭಾರತೀಯ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕ ಬಸ್ ಕಮರಿಗೆ ಉರುಳಿ ಬಿದ್ದಿದ್ದು, ಏಳು ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

ನೇಪಾಳದ ಗಂಡಕಿ ಪ್ರಾಂತ್ಯದಲ್ಲಿಈ ಘಟನೆ ನಡೆದಿದ್ದು ಮನಕಮನ ದೇವಸ್ಥಾನದಿಂದ ಮಜುವಾ ಕಡೆಗೆ ಬರುತ್ತಿದ್ದ ಬಸ್ ಮೈಕ್ರೋಬಸ್ ಗೂರ್ಖಾ ಜಿಲ್ಲೆಯ ಸಮೀಪ ಕಮರಿಗೆ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರು ಸೇರಿದ್ದಾರೆ. ಅವರೆಲ್ಲರೂ ಭಾರತೀಯ ಪ್ರಜೆಗಳು ಎಂದು ಗೂರ್ಖಾ ಜಿಲ್ಲೆಯ ಜಿಲ್ಲಾ ಸಂಚಾರ ಪೊಲೀಸ್ ಕಚೇರಿಯ ಮುಖ್ಯಸ್ಥ ಸೂರಜ್ ಆರ್ಯಲ್ ತಿಳಿಸಿದ್ದಾರೆ.

ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಅನ್ಬುಖೈರೇನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

Must Read