September 30, 2026
Wednesday, September 30, 2026
spot_img

ದಿನಭವಿಷ್ಯ: ಅನಿರೀಕ್ಷಿತ ಬದಲಾವಣೆಗಳು ಎದುರಾಗಲಿವೆ, ಕುಟುಂಬಸ್ಥರ ಕಿವಿಮಾತು ಆಲಿಸುವುದು ಉತ್ತಮ

ಮೇಷ
ನೀವು ನಿರೀಕ್ಷಿಸದ ಬದಲಾವಣೆ ಸಂಭವ. ಅದನ್ನು ಒಪ್ಪಿಕೊಳ್ಳಿ. ವಿರೋಧಿಸಬೇಡಿ ಕುಟುಂಬಸ್ಥರ ಕಿವಿಮಾತು ಪಾಲಿಸುವುದು ವಿಹಿತ.
ವೃಷಭ
ಸ್ವಂತ ಉದ್ದಿಮೆಯಲ್ಲಿ ಆಂಶಿಕ ಯಶಸ್ಸು. ಅನುಚಿತ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ. ಪ್ರೀತಿಯ ವಿಚಾರದಲ್ಲಿ ಬಿಕ್ಕಟ್ಟು.
ಮಿಥುನ
ಉತ್ಸಾಹ ಹೆಚ್ಚಿಸುವ ಬೆಳವಣಿಗೆ. ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಮೀಪಿಸಿದೆ. ಅದೃಷ್ಟ ಜತೆಗಿದೆ, ಪೂರಕ ಪ್ರಸಂಗ ಸೃಷ್ಟಿಯಾಗಲಿದೆ.
ಕಟಕ
ನಿಮ್ಮ ಪತನಕ್ಕೆ ಕೆಲವರ ಪ್ರಯತ್ನ ನಡೆದರೂ ಅದು ಫಲ ನೀಡದು. ಅವರ ಮುಂದೆಯೇ ಸಾಧನೆ ತೋರುವಿರಿ.
ಸಿಂಹ
ಎಲ್ಲ ವಿಚಾರದಲ್ಲಿ ನಿಮಗೆ ಅನುಕೂಲಕರ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸ-ಲ. ಆರೋಗ್ಯ ಸಮಸ್ಯೆ ಪರಿಹಾರ. ನೆಮ್ಮದಿ.
ಕನ್ಯಾ
ಎಂದಿಗಿಂತ ಹೆಚ್ಚು ಕಾರ್ಯದೊತ್ತಡ. ನಿಭಾಯಿಸಲು ಶಕ್ತ. ಈಡೇರಿಸಲಾಗದ ಆಶ್ವಾಸನೆ ಯಾರಿಗೂ ಕೊಡಬೇಡಿ.
ತುಲಾ
ಯಾವುದೋ ವಿಷಯ ಮನಸ್ಸಿಗೆ ಕಿರಿಕಿರಿ ತರುತ್ತದೆ. ಅದನ್ನು ಪರಿಹರಿಸದೆ ನೆಮ್ಮದಿ ಸಿಗದು. ಅಧ್ಯಾತ್ಮ, ಧ್ಯಾನ ಸಹಕಾರಿಯಾದೀತು.
ವೃಶ್ಚಿಕ
ಎಲ್ಲ ವಿಧದಲ್ಲೂ ಇಂದು ಸವಾಲಿನ ದಿನ. ಮನಸ್ಸು ಶಾಂತಗೊಳಿಸುವ ಹವ್ಯಾಸದಲ್ಲಿ ತೊಡಗಿ. ಬಂಧುಗಳ ಸಮಸ್ಯೆ ನಿಮ್ಮ ಮೇಲೆ ಎಳೆದುಕೊಳ್ಳದಿರಿ.
ಧನು
ಅದೃಷ್ಟ ನಿಮ್ಮ ಜತೆಗಿರದು. ಎಷ್ಟೇ ಪ್ರಯತ್ನ ಹಾಕಿದರೂ ಸೂಕ್ತ ಫಲ ದೊರಕದು. ಹಣ ಗಳಿಕೆಯ ವಿಚಾರದಲ್ಲೂ ಹಿನ್ನಡೆ ಕಾಣುವಿರಿ.
ಮಕರ
ದಿನವಿಡೀ ಒತ್ತಡ. ಯಾವುದೇ ಕೆಲಸ ಮುಗಿಸಿದರೂ ಮತ್ತೊಂದು ಕೆಲಸ ಹೆಗಲೇರುತ್ತದೆ.ಅಜೀರ್ಣ ಸಮಸ್ಯೆ ಕಾಡಬಹುದು.
ಕುಂಭ
ಏನೋ ಕಳಕೊಂಡ ಭಾವ ಕಾಡುವುದು. ಭಾವುಕ ಸನ್ನಿವೇಶ ಎದುರಿಸುವಿರಿ. ದೈಹಿಕ ನೋವೂ ಕಾಡಲಿದೆ. ದೇವರ ಪ್ರಾರ್ಥನೆ ಮಾಡಿ.
ಮೀನ
ಆತ್ಮೀಯರ ಹಿತಕ್ಕಾಗಿ ಇಂದು ಹೆಚ್ಚು ಗಮನ ಹರಿಸುವಿರಿ. ಕೆಲವು ಏರುಪೇರು ಎದುರಿಸುವ ಪ್ರಸಂಗ ಬಂದೀತು. ಮನೋದೃಢತೆಯಿರಲಿ.

Must Read