April 30, 2026
Thursday, April 30, 2026
spot_img

ಸದ್ದಿಲ್ಲದೆ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ: ಫೋಟೋ ನೋಡಿ ಫ್ಯಾನ್ಸ್ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿರುವಾಗ, ಹಾಲಿ ಚಾಂಪಿಯನ್ ತಂಡವಾಗಿರುವ ಆರ್‌ಸಿಬಿಗೆ ಸಂಬಂಧಿಸಿದ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ.

ತಂಡದ ವೇಗದ ಬೌಲರ್ ಯಶ್ ದಯಾಳ್ ರಹಸ್ಯವಾಗಿ ವಿವಾಹವಾಗಿರುವ ವಿಚಾರ ಇದೀಗ ಬಹಿರಂಗವಾಗಿದೆ. ವರದಿಗಳ ಪ್ರಕಾರ, ದಯಾಳ್ ಫೆಬ್ರವರಿ 4ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಮದುವೆಯಾದರು. ಮದುವೆಯನ್ನು ಸಂಪೂರ್ಣ ರಹಸ್ಯವಾಗಿಟ್ಟುಕೊಳ್ಳಲಾಗಿದ್ದು, ಎರಡೂ ಕುಟುಂಬದ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:

ಸ್ನೇಹಿತರು ಅಥವಾ ಕ್ರಿಕೆಟಿಗರನ್ನು ಆಹ್ವಾನಿಸದೇ ಸಣ್ಣ ಮಟ್ಟಿನಲ್ಲಿ ಈ ವಿವಾಹ ನೆರವೇರಿದಂತಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ಅವರು ವ್ಲಾಗರ್ ಶ್ವೇತಾ ಪುಂಡಿರ್ ಅವರನ್ನು ವರಿಸಿದ್ದಾರೆ ಎನ್ನಲಾಗುತ್ತಿದೆ.

ಇತ್ತ ದಯಾಳ್ ಅವರ ವೃತ್ತಿಜೀವನದ ಮೇಲೆ ಕಾನೂನು ಪ್ರಕರಣದ ನೆರಳು ಬೀಳುವ ಸಾಧ್ಯತೆಯೂ ಇದೆ. ಕಳೆದ ವರ್ಷ ಯುವತಿಯೊಬ್ಬರು ಮದುವೆಯ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ಮುಂದುವರಿಯುತ್ತಿದೆ.

ಈ ವಿವಾದದ ಹಿನ್ನೆಲೆ, ಐಪಿಎಲ್ 2026ರಲ್ಲಿ ಆರ್‌ಸಿಬಿ ತಂಡದ ಪರ ದಯಾಳ್ ಆಡುತ್ತಾರೆಯೇ ಎಂಬ ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !