July 16, 2026
Thursday, July 16, 2026
spot_img

CINE | ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ನೂರು ಕೋಟಿ: ಇದ್ರಲ್ಲೇ ಗೊತ್ತಾಗುತ್ತೆ ‘ಧುರಂಧರ್ 2’ ಹವಾ ಹೇಗಿದೆ ಅಂತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಬಿಡುಗಡೆಯ ಮೊದಲೇ ಭಾರೀ ದಾಖಲೆ ನಿರ್ಮಿಸಿದೆ. ಚಿತ್ರಕ್ಕೆ ಪ್ರಾರಂಭವಾದ ಅಡ್ವಾನ್ಸ್ ಬುಕಿಂಗ್ ಕೆಲವೇ ದಿನಗಳಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿರುವುದಾಗಿ ವರದಿಗಳು ತಿಳಿಸಿವೆ.

ಚಿತ್ರದ ಟ್ರೈಲರ್ ಮಾರ್ಚ್ 7ರಂದು ಬಿಡುಗಡೆಯಾಗಿದ್ದು, ಅದೇ ದಿನ ಪೇಯ್ಡ್ ಪ್ರೀಮಿಯರ್ ಶೋಗಳಿಗಾಗಿ ಮುಂಗಡ ಟಿಕೆಟ್ ಮಾರಾಟ ಆರಂಭವಾಗಿತ್ತು. ನಂತರ ಬಿಡುಗಡೆಯ ದಿನ ಮತ್ತು ಅದರ ಮುಂದಿನ ಕೆಲವು ದಿನಗಳ ಪ್ರದರ್ಶನಗಳಿಗೂ ಬುಕಿಂಗ್ ತೆರೆಯಲಾಗಿದ್ದು, ಎಲ್ಲ ಸೇರಿ ಚಿತ್ರ ಈಗಾಗಲೇ 100 ಕೋಟಿ ಗಡಿ ದಾಟಿದೆ.

ಇದನ್ನೂ ಓದಿ:

ಸಂಗ್ರಹದ ಪ್ರಮುಖ ಭಾಗ ಪೇಯ್ಡ್ ಪ್ರೀಮಿಯರ್ ಮತ್ತು ಮಾರ್ಚ್ 19ರ ಬಿಡುಗಡೆ ದಿನದ ಟಿಕೆಟ್ ಮಾರಾಟದಿಂದಲೇ ಬಂದಿದೆ. ಭಾರತದಲ್ಲಿ ಸುಮಾರು 44 ಕೋಟಿಗೂ ಅಧಿಕ ಮೊತ್ತ ಮುಂಗಡ ಬುಕ್ಕಿಂಗ್‌ನಿಂದ ಬಂದಿದ್ದು, ಉಳಿದ ಸಂಗ್ರಹ ವಿದೇಶಿ ಮಾರುಕಟ್ಟೆಯಿಂದ ಲಭಿಸಿದೆ.

ಕೆಲ ಗಲ್ಫ್ ರಾಷ್ಟ್ರಗಳಲ್ಲಿ ಪ್ರದರ್ಶನಕ್ಕೆ ನಿರ್ಬಂಧ ಇದ್ದರೂ ಚಿತ್ರಕ್ಕೆ ವಿದೇಶದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಪೇಯ್ಡ್ ಪ್ರೀಮಿಯರ್ ಶೋಗಳು ಮಾರ್ಚ್ 18ರ ಸಂಜೆ ಆರಂಭವಾಗಲಿದ್ದು, ಮಾರ್ಚ್ 19ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !