March 16, 2026
Monday, March 16, 2026
spot_img

ಪಲ್ಯ, ಗ್ರೇವಿ & More 36 | ಬಾಯಿ ಚಪ್ಪರಿಸಿಕೊಂಡು ತಿಂತೀರ ಈ ಕರಿಬೇವಿನ ಚಟ್ನಿಪುಡಿಯನ್ನು

ಅನ್ನ, ದೋಸೆ, ಇಡ್ಲಿ ಅಥವಾ ಪುಂಡಿಗೆ ಅದ್ಭುತ ರುಚಿ ನೀಡುವ ಒಂದು ಸೈಡ್ ಡಿಶ್ ಅಂದ್ರೆ ಅದು ಕರಿಬೇವಿನ ಚಟ್ನಿಪುಡಿ. ಸಾಮಾನ್ಯವಾಗಿ ಅಡುಗೆಯಲ್ಲಿ ಒಗ್ಗರಣೆಗೆ ಬಳಸುವ ಕರಿಬೇವು ಆರೋಗ್ಯಕ್ಕೂ ತುಂಬಾ ಉಪಯುಕ್ತ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಕರಿಬೇವಿನ ಚಟ್ನಿಪುಡಿ ಕೆಲವೇ ಪದಾರ್ಥಗಳಿಂದ ಸಿದ್ಧವಾಗುತ್ತದೆ. ಒಂದು ಬಾರಿ ಮಾಡಿ ಇಟ್ಟುಕೊಂಡರೆ ಹಲವಾರು ದಿನಗಳವರೆಗೆ ಬಳಸಬಹುದು.

ಬೇಕಾಗುವ ಪದಾರ್ಥಗಳು

ಕರಿಬೇವು ಎಲೆಗಳು – 1 ಕಪ್
ಉದ್ದಿನ ಬೇಳೆ – 2 ಚಮಚ
ಕಡಲೆ ಬೇಳೆ – 2 ಚಮಚ
ಒಣ ಮೆಣಸಿನಕಾಯಿ – 5 ರಿಂದ 6
ಎಳ್ಳು – 1 ಚಮಚ
ಬೆಳ್ಳುಳ್ಳಿ – 3 ರಿಂದ 4 ಎಸಳು
ಹುಣಸೆಹಣ್ಣು – ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಚಮಚ

ಮಾಡುವ ವಿಧಾನ

ಮೊದಲು ಕರಿಬೇವು ಎಲೆಗಳನ್ನು ಚೆನ್ನಾಗಿ ತೊಳೆದು ಒಣಗಲು ಬಿಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕರಿಬೇವು ಎಲೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಎಲೆಗಳು ಗರಿಗರಿ ಆಗುವವರೆಗೆ ಹುರಿದು ತೆಗೆದು ಇಡಿ.

ಅದೇ ಬಾಣಲೆಗೆ ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನಕಾಯಿ ಮತ್ತು ಎಳ್ಳನ್ನು ಹಾಕಿ ಸುಗಂಧ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಮತ್ತು ಹುಣಸೆಹಣ್ಣು ಸೇರಿಸಿ ಸ್ವಲ್ಪ ಹುರಿಯಿರಿ.

ಎಲ್ಲ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಉಪ್ಪು ಸೇರಿಸಿ ಮುದ್ದೆಯಾಗದಂತೆ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.

ಇದೀಗ ರುಚಿಕರವಾದ ಕರಿಬೇವಿನ ಚಟ್ನಿಪುಡಿ ಸಿದ್ಧ. ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ಈ ಪುಡಿಯನ್ನು ಹಾಕಿ ತಿಂದರೆ ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !