ಮೇಷ
ಭಾವನಾತ್ಮಕ ಒತ್ತಡದಿಂದ ಮುಕ್ತಿ. ಸಂಬಂಧ ಮತ್ತೆ ಸರಿದಾರಿಗೆ ಬರಲಿದೆ. ಮಕ್ಕಳ ಸಾಧನೆಯಿಂದ ತೃಪ್ತಿ. ಖರ್ಚು ಹೆಚ್ಚಬಹುದು.
ವೃಷಭ
ನಿಮ್ಮ ನಿಲುವಿನಲ್ಲಿ ಬದಲಾವಣೆ ತರುವ ಸನ್ನಿವೇಶ ಬಂದೀತು. ಇತರರ ಮಾತಿಗೂ ಬೆಲೆ ಕೊಡಿ. ಹಣದತ್ತಡ. ವ್ಯಯ ಅಧಿಕ.
ಮಿಥುನ
ಭಾವುಕ ವಿಷಯ ದಲ್ಲಿ ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ನಿಮ್ಮ ಮನಸ್ಸಿನ ದೌರ್ಬಲ್ಯ ಎಲ್ಲರಿಗು ತಿಳಿಯುವುದು ಬೇಡ. ವಾದದಿಂದ ದೂರವಿರಿ.
ಕಟಕ
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಆರ್ಥಿಕ ಸಂತೃಪ್ತಿ.
ಸಿಂಹ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ಯಾರನ್ನೂ ಕುರುಡಾಗಿ ನಂಬದಿರಿ. ಸಮೀಪ ಬಂಧುಗಳ ಅಸಹಕಾರ. ಧನಪ್ರಾಪ್ತಿಗೆ ಅಡ್ಡಿ.
ಕನ್ಯಾ
ಕೆಲಸದ ಒತ್ತಡದಿಂದ ಹೊರಬಂದು ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ. ಬಂಧುಗಳ ಸಮಾಗಮ.
ತುಲಾ
ಏನೋ ಕೊರಗು ನಿಮ್ಮನ್ನು ದಿನವಿಡೀ ಕಾಡುತ್ತದೆ. ಎಲ್ಲರ ಜತೆ ಸಂಬಂಧ ವೃದ್ಧಿಸಲು ಗಮನ ಕೊಡಿ. ಆರ್ಥಿಕ ಒತ್ತಡ ಹೆಚ್ಚುವುದು.
ವೃಶ್ಚಿಕ
ವಿರೋಧಿಗಳ ಮನಸ್ಸನ್ನೂ ಇಂದು ಒಲಿಸಬಲ್ಲಿರಿ. ಇದು ನಿಮ್ಮ ವ್ಯವಹಾರವನ್ನು ಸುಲಲಿತಗೊಳಿಸಲಿದೆ. ಆರ್ಥಿಕ ಸ್ಥಿತಿ ತೃಪ್ತಿಕರ.
ಧನು
ಕಾಯುತ್ತಿದ್ದ ಅವಕಾಶವೊಂದು ಇಂದು ಸಿಗುವುದು. ಆದರೆ ಅದರಿಂದ ನಿಮಗೆ ಹೆಚ್ಚು ಲಾಭವಾಗದು. ಕೌಟುಂಬಿಕ ವೈಮನಸ್ಸು.
ಮಕರ
ಹೊಸ ವ್ಯವಹಾರಕ್ಕೆ ಈಗಲೆ ಕೈಹಾಕಬೇಡಿ. ವಿಘ್ನಗಳು ಕಾಡಬಹುದು. ನಿಮ್ಮ ನಡೆಯಲ್ಲಿ ತಪ್ಪಿದ್ದರೆ ಕೂಡಲೇ ತಿದ್ದಿಕೊಳ್ಳಿ. ಸಮರ್ಥಿಸಬೇಡಿ.
ಕುಂಭ
ಗುರಿ ಸಾಧನೆಗೆ ಕೆಲವರು ಅಡ್ಡಗಾಲು ಹಾಕುವರು. ಅವರನ್ನು ದೂರವಿಡಿ. ಭಾವನಾತ್ಮಕ ಒತ್ತಡ ಎದುರಿಸುವಿರಿ. ಸಂಯಮ ಅವಶ್ಯ.
ಮೀನ
ಸಣ್ಣ ವಿಷಯ ಗಂಭೀರವಾಗಿ ಪರಿಗಣಿಸಿ ಮನಸ್ಸು ಹಾಳು ಮಾಡಿಕೊಳ್ಳುವಿರಿ. ಮನೆಯಲ್ಲಿ ಎಲ್ಲರ ಜತೆ ಹೊಂದಾಣಿಕೆ ಒಳಿತು.



