October 1, 2026
Thursday, October 1, 2026
spot_img

Summer Drink | ಬೀಟ್ರೂಟ್ ಮಜ್ಜಿಗೆ: ನೋಡೋಕು ಕಲರ್ ಫುಲ್, ಆರೋಗ್ಯಕ್ಕೂ ಬೆಸ್ಟ್

ಬೇಸಿಗೆ ಬಿಸಿಲಿನಲ್ಲಿ ತಣ್ಣಗೆ ಪಾನೀಯವೊಂದು ಕುಡಿಯುವುದು ಬಹಳ ಇಷ್ಟದ ಕೆಲಸ. ಅದ್ರಲ್ಲೂ ಈ ಮಜ್ಜಿಗೆ ಅಂದ್ರೆ ಎಲ್ಲರಿಗು ಪ್ರೀತಿ. ಆರೋಗ್ಯಕರ, ರುಚಿಕರ ಮತ್ತು ಪೋಷಕತೆಯುತ ಪಾನೀಯ ಇದು. ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಈ ಮಜ್ಜಿಗೆಗೆ ಬೀಟ್ರೂಟ್ ಬೆರೆಸಿದ್ರೆ ನೋಡೋಕು ಚಂದ ಕುಡಿಯೋಕೆ ರುಚಿನೂ ಅದ್ಬುತ.

ಬೇಕಾಗುವ ಸಾಮಗ್ರಿಗಳು:

ಬೀಟ್ರೂಟ್ – 1
ಮೊಸರು – 1 ಕಪ್
ನೀರು – ¼ ಕಪ್
ಸಾಸಿವೆ – ½ ಚಮಚ
ಕರಿಬೇವು – 8–10 ಎಲೆಗಳು
ಶುಂಠಿ – 1 ಚಮಚ (ತುರಿದದ್ದು)
ಹಸಿರು ಮೆಣಸಿನಕಾಯಿ – 1–2

ತಯಾರಿಸುವ ವಿಧಾನ:

ಬೀಟ್ರೂಟ್ ಅನ್ನು ಬೇಯಿಸಿ, ತಣ್ಣಗಾದ ನಂತರ ಚಿಕ್ಕ ತುಂಡುಗಳಲ್ಲಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

ಬೀಟ್ರೂಟ್ ಪೇಸ್ಟ್ ಅನ್ನು ಮೊಸರಿನೊಂದಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ನೀರು ಸೇರಿಸಿಕೊಳ್ಳಿ.

ಸಾಸಿವೆ, ಕರಿಬೇವು, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಒಗ್ಗರಣೆ ಮಾಡಿ ಇದಕ್ಕೆ ಸೇರಿಸಿ. ಕೊನೆಗೆ ಬೇಕಿದ್ದರೆ ಐಸ್ ಹಾಕಿ ತಣ್ಣಗೆ ಸವಿಯಿರಿ.

Must Read