September 18, 2026
Friday, September 18, 2026
spot_img

ವಿಧಾನಸಭೆ ಅಧಿವೇಶನ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಿಗಳಿಗೆ ಗೇಟ್ ಪಾಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಅಧಿವೇಶನದಲ್ಲಿ ಇಂದು ಸ್ಪೀಕರ್ ಯುಟಿ ಖಾದರ್ ಅವರು ಸಚಿವರು ಹಾಗು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮೂವರು ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದ್ದಾರೆ.

ಅಧಿವೇಶನದ ಸಮಯದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಉತ್ತರ ನೀಡಬೇಕಿದ್ದ ಸಚಿವರು, ಅಧಿಕಾರಿಗಳು ಸದನಕ್ಕೆ ಗೈರಾಗುತ್ತಿದ್ದು, ಇದರಿಂದ ಅಸಮಾಧಾನಗೊಂಡ ಸ್ಪೀಕರ್ ಯುಟಿ ಖಾದರ್ ಪೀಠ ಬಿಟ್ಟು ಹೊರನಡೆದರು.

ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್ ಖಾದರ್ ಅವರ ಮನವೊಲಿಸಿದ್ದು, ಈ ಹಿನ್ನೆಲೆ ಸದನ ಪುನಾರಂಭಗೊಂಡಿದೆ.

ಈ ವೇಳೆ ಸ್ಪೀಕರ್ ಖಾದರ್, ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳನ್ನು ಅಮಾನತಿಗೆ ಸೂಚನೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !