March 16, 2026
Monday, March 16, 2026
spot_img

ಮನಿ ಡಬ್ಲಿಂಗ್‌ | ಮನೆಯಲ್ಲಿ ಶೋಧಕಾರ್ಯದ ವೇಳೆ ಎಸ್ಕೇಪ್‌ ಆಗಿದ್ದ ನಗರಸಭೆ ಮಾಜಿ ಸದಸ್ಯ ಅರೆಸ್ಟ್‌

ಹೊಸದಿಗಂತ ವರದಿ ಚಿತ್ರದುರ್ಗ:

ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್ ಅವರನ್ನು ಪೊಲೀಸರು ಅರೆಸ್ಟ್ (ನಗರಸಭೆ ಸದಸ್ಯ) ಮಾಡಿದ್ದಾರೆ. ಮನಿ ಡಬ್ಲಿಂಗ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಚಂದ್ರಶೇಖರ್ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿದ್ದು, ಮಾರ್ಚ್ 4 ರಂದು ಪೊಲೀಸರು ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಚಂದ್ರಶೇಖರ್ ಪರಾರಿಯಾಗಿದ್ದರು.

ಈ ಪ್ರಕರಣದಲ್ಲಿ ಮಂಗಳೂರು ಮೂಲದ ರೋಷನ್ ಸಲ್ದಾನ್ ಎಂಬ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಚಂದ್ರಶೇಖರ್ ಸೇರಿ ಇಬ್ಬರು ಆರೋಪಿಗಳು (ನಗರಸಭೆ ಸದಸ್ಯ) ಪರಾರಿಯಾಗಿದ್ದರು. ನಿನ್ನೆ ಚಂದ್ರಶೇಖರ್ ಅವರನ್ನು ಬಂಧಿಸಿದ ಪೊಲೀಸರು (ನಗರಸಭೆ ಸದಸ್ಯ) ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ಅರುಣ್ ನಾಗೇಗೌಡ, ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !