March 18, 2026
Wednesday, March 18, 2026
spot_img

ಹೊಸ ವರ್ಷ ಯುಗಾದಿಗೆ ಖರೀದಿ ಜೋರು, ಬೆಂಗಳೂರಿನ ಮಾರ್ಕೆಟ್‌ಗಳಿಗೆ ಹಬ್ಬದ ಕಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ನಾಡಿನಾದ್ಯಂತ ಹಿಂದುಗಳ ಹೊಸ ವರ್ಷಾಚರಣೆ ಯುಗಾದಿ ಸಂಭ್ರಮ ಆರಂಭವಾಗಲಿದೆ. ಈಗಾಗಲೇ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ ಖರೀದಿ ಜೋರಾಗಿದೆ.

ಕೆಆರ್‌ ಮಾರ್ಕೆಟ್‌ನಲ್ಲಿ ಇಂದು ಬೆಳ್ಳಂಬೆಳಗ್ಗೆ ಜನರು ಖರೀದಿ ಮಾಡಿದ್ದಾರೆ. ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನ ಸಾಗರವೇ ಹರಿದುಬಂದಿದೆ.

ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣುಗಳ ದರ ಕೊಂಚ ಏರಿಕೆ ಕಂಡಿದೆ. ವಿಶೇಷವಾಗಿ ಮಲ್ಲಿಗೆ ಹೂವು ಸಾಮಾನ್ಯ ದಿನಗಳಿಗಿಂತ ದುಬಾರಿಯಾಗಿದ್ದು, ಕೆಜಿಗೆ 1,000 ರೂಪಾಯಿ ತನಕ ಮಾರಾಟವಾಗುತ್ತಿದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಬೇವು ಮತ್ತು ಮಾವಿನ ಸೊಪ್ಪಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಮಲ್ಲಿಗೆ ಹೂವು ಕೆಜಿಗೆ ಸಾವಿರ ರೂಪಾಯಿ ಮುಟ್ಟಿದೆ.ಇನ್ನು ಸೇವಂತಿಗೆ ಹಾಗೂ ಗುಲಾಬಿ 250 ರೂಪಾಯಿಗೆ ಸಿಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !