October 16, 2026
Friday, October 16, 2026
spot_img

ಅವಾಂತರ ಸೃಷ್ಟಿಸಿದ ಬೇಸಿಗೆ ಮಳೆ: ಸಿಡಿಲು ಬಡಿದು ಇಬ್ಬರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬೇಸಿಗೆ ಮಳೆ ಅವಾಂತರ ಸೃಷ್ಟಿಸಿದ್ದು, ಜನಜೀವನ ಹೈರಾಣಾಗಿದೆ. ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಇಬ್ಬರು ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕು ಕಾಶ್ಮೀರದಂತೆ ಕಾಣಿಸುತ್ತಿದೆ. ಅತಿಯಾದ ಆಲಿಕಲ್ಲು ಮಳೆಯಿಂದಾಗಿ ಮೆಣಸಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಿಂಗಪ್ಪ ಅಮಾತ್ಯ ಮೃತಪಟ್ಟಿದ್ದಾರೆ.

ಬೆಣ್ಣೆಹಳ್ಳ ಸಮೀಪ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಹಿಂದಿರುಗುವಾಗ ಸಿಡಿಲು ಬಡಿದು ಸಾವನಪ್ಪಿದ್ದಾರೆ.

ಬೆಳಗಾವಿಯಲ್ಲಿ ಮಳೆಗೆ ಮನೆಯ ಗೋಡೆ ಕುಸಿದಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಂಟಮೂರಿ ಗ್ರಾಮದ ಪರ್ವಿನ್‌ ಬೇಪಾರಿ ಮೃತರು. ಮಲಗಿರುವ ವೇಳೆ ಗೋಡೆ ಕುಸಿದಿದ್ದು, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Must Read