March 19, 2026
Thursday, March 19, 2026
spot_img

ಆಲಿಕಲ್ಲು ಮಳೆಯ ಸ್ಟೋರಿ ಇನ್ನೂ ಮುಗಿದಿಲ್ಲ, ಇನ್ನೆರಡು ದಿನ 20 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಹಲವೆಡೆ ಈಗಾಗಲೇ ಆಲಿಕಲ್ಲು ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿದೆ. ಬೇಸಿಗೆ ಮಳೆ ಬಂದು ಹೋಯ್ತು ಬಿಡು ಎಂದುಕೊಂಡವರಿಗೆ ಹವಾಮಾನ ಇಲಾಖೆ ಶಾಕ್‌ ನೀಡಿದೆ.

ಈ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದ್ದು, 20 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು , ಹಾಸನ , ಕೊಡಗು , ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮಳೆಯಿಂದಾಗಿ ಗ್ರಾಮೀಣ ಜನರ ಜೀವನ ಹೈರಾಣಾಗಿದೆ. ಮಳೆಯಿಂದ ಆಗಿರುವ ನಷ್ಟವನ್ನು ಸರ್ಕಾರ ಭರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !