March 19, 2026
Thursday, March 19, 2026
spot_img

ಹಬ್ಬದೂಟ ಸಖತ್ತಾಗಿ ‘ಬ್ಯಾಟಿಂಗ್‌’ ಮಾಡಿದ್ರಾ? ಹೊಟ್ಟೆ ಉಬ್ಬರ ತಡೆಯಲು ಈ ಪಾನೀಯಗಳೇ ಮದ್ದು

ಹಬ್ಬದೂಟ ಅಂದಮೇಲೆ ಎಲೆ ತುಂಬಾ ಬಗೆ ಬಗೆಯ ಖಾದ್ಯಗಳು ಇರೋದು ಸಹಜ. ಸ್ವಲ್ಪ ಜಾಸ್ತಿನೇ ತಿಂದಾಕಿದ್ರೆ ಆಮೇಲೆ ಹೊಟ್ಟೆ ಭಾರ ಆಗೋದು, ಗ್ಯಾಸ್ ಅಥವಾ ಅಜೀರ್ಣ ಕಾಡೋದು ಗ್ಯಾರಂಟಿ. ತಿಂದಿದ್ದೆಲ್ಲಾ ಚೆನ್ನಾಗಿ ಅರಗಬೇಕು ಅಂದ್ರೆ ಈ ಕೆಳಗಿನ ಮನೆಮದ್ದುಗಳು ನಿಮಗಾಗಿ:

ಜೀರಿಗೆ ಮತ್ತು ಓಂಕಾಳು ನೀರು: ಒಂದು ಲೋಟ ನೀರಿಗೆ ಜೀರಿಗೆ ಮತ್ತು ಸ್ವಲ್ಪ ಓಂಕಾಳು ಹಾಕಿ ಕುದಿಸಿ. ಈ ನೀರನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರ ತಕ್ಷಣ ಕಡಿಮೆಯಾಗುತ್ತದೆ.

ಶುಂಠಿ ಚಹಾ: ಹಸಿ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ಅಥವಾ ನಿಮ್ಮ ಚಹಾದೊಂದಿಗೆ ಬೆರೆಸಿ ಕುಡಿಯಿರಿ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ.

ಉಪ್ಪು ಹಾಕಿದ ಮಜ್ಜಿಗೆ: ಹಬ್ಬದ ಭಾರೀ ಊಟದ ನಂತರ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಇಂಗು, ಉಪ್ಪು ಮತ್ತು ಕರಿಬೇವಿನ ಸೊಪ್ಪು ಹಾಕಿ ಕುಡಿಯುವುದು ಅತ್ಯುತ್ತಮ. ಇದು ಹೊಟ್ಟೆಯನ್ನು ತಂಪು ಮಾಡುತ್ತದೆ.

ನಿಂಬೆ ರಸ ಮತ್ತು ಜೇನುತುಪ್ಪ: ಉಗುರುಬೆಚ್ಚಗಿನ ನೀರಿಗೆ ಅರ್ಧ ಹೋಳು ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದು ಶರೀರದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ.

ಪುದೀನಾ ಪಾನೀಯ: ಪುದೀನಾ ಎಲೆಗಳ ರಸ ಅಥವಾ ಪುದೀನಾ ಟೀ ಕುಡಿಯುವುದರಿಂದ ಅಸಿಡಿಟಿ ಮತ್ತು ಎದೆಯುರಿ ಶಮನವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !