ಒಳ್ಳೆಯವನಾಗಿರು ಅಂತ ಎಲ್ಲರೂ ಹೇಳ್ತಾರೆ…
ಆದ್ರೆ ಒಂದು ಪ್ರಶ್ನೆ ಎಷ್ಟರ ಮಟ್ಟಿಗೆ ಒಳ್ಳೆಯವನಾಗಿರಬೇಕು ಅಂತ ಯಾರೂ ಹೇಳೋದಿಲ್ಲ.
ಯಾರಿಗಾದರೂ “ಇಲ್ಲ” ಅನ್ನೋದಕ್ಕೆ ಕಷ್ಟವಾಗುತ್ತಿದೆಯಾ? ನಿಮ್ಮ ಸಮಯ, ನಿಮ್ಮ ಮನಸ್ಸು, ನಿಮ್ಮ ಶಕ್ತಿ ಎಲ್ಲವನ್ನೂ ಇತರರಿಗಾಗಿ ಕೊಟ್ಟು, ಕೊನೆಯಲ್ಲಿ ನಿಮಗೆ ನಿಮಗೆ ಏನೂ ಉಳಿಯದೇ ಹೋಗ್ತಿದೆಯಾ? ಹಾಗಿದ್ದರೆ, ನೀವು ಒಳ್ಳೆಯವರು ಅಲ್ಲ… ಸ್ವಲ್ಪ ಹೆಚ್ಚು ಒಳ್ಳೆಯವರು.
ಸಮಸ್ಯೆ ಒಳ್ಳೆಯತನದಲ್ಲಿಲ್ಲ. ಅದರ ಮಿತಿಯಿಲ್ಲದ ಬಳಕೆಯಲ್ಲಿ ಇದೆ. ನಾವು ಎಲ್ಲರನ್ನೂ ಖುಷಿಪಡಿಸಲು ಪ್ರಯತ್ನಿಸುತ್ತಾ, ನಮ್ಮನ್ನೇ ಮರೆತುಬಿಡುತ್ತೇವೆ. “ಅವರಿಗೆ ಬೇಸರ ಆಗಬಾರದು” ಅನ್ನೋ ಒಂದು ಭಯ ನಮ್ಮ ನಿರ್ಧಾರಗಳನ್ನು ನಿಯಂತ್ರಿಸತೊಡಗುತ್ತದೆ.
ಆದರೆ ಸತ್ಯ ಏನೆಂದರೆ ನೀವು ಎಲ್ಲರಿಗೂ ಬೇಕಾದಷ್ಟು ಒಳ್ಳೆಯವರಾಗಿದ್ದರೂ, ಕೆಲವರಿಗೆ ಅದು ಸಾಕಾಗೋದಿಲ್ಲ. ಕೆಲವರು ನಿಮ್ಮ ಒಳ್ಳೆಯತನವನ್ನು ಅರ್ಥಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಅದನ್ನೇ ಬಳಸಿಕೊಳ್ಳುತ್ತಾರೆ.
ಇದನ್ನೂ ಓದಿ:
ಒಳ್ಳೆಯವನಾಗಿರುವುದು ತಪ್ಪಲ್ಲ. ಆದರೆ ನಿಮ್ಮ ಮೌಲ್ಯ ಕಳೆದುಕೊಳ್ಳುವ ಮಟ್ಟಿಗೆ ಒಳ್ಳೆಯವನಾಗಬೇಡಿ. ಗಡಿ ಹಾಕುವುದು, “ಇಲ್ಲ” ಎನ್ನುವುದು, ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಇವು ಸ್ವಾರ್ಥವಲ್ಲ.
ನೀವು ನಿಮ್ಮನ್ನು ಕಳೆದುಕೊಂಡು ಇತರರನ್ನು ಸಂತೋಷಪಡಿಸಿದರೆ, ಕೊನೆಯಲ್ಲಿ ಖಾಲಿಯಾಗೋದು ನೀವು ಮಾತ್ರ.
ಆದ್ದರಿಂದ ಒಂದು ಮಾತು ನೆನಪಿಟ್ಟುಕೊಳ್ಳಿ
ಒಳ್ಳೆಯವನಾಗಿರಿ…
ಆದರೆ ನಿಮ್ಮ ಮೇಲೆ ಅನ್ಯಾಯವಾಗುವ ಮಟ್ಟಿಗೆ ಅಲ್ಲ.



