September 19, 2026
Saturday, September 19, 2026
spot_img

ಇನ್ಸ್ಟಾದಲ್ಲಿ ಹೊಂಬಾಳೆ ಫಿಲಂ, ಕಾಂತಾರ ಅನ್‌ಫಾಲೋ ಮಾಡಿದ ರಿಷಭ್‌ ಶೆಟ್ಟಿ, ರೀಸನ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ, ನಿರ್ದೇಶದ ರಿಷಭ್‌ ಶೆಟ್ಟಿ ಇನ್ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲಂ ಹಾಗೂ ಕಾಂತಾರದ ಪೇಜ್‌ನ್ನು ಅನ್‌ಫಾಲೋ ಮಾಡಿದ್ದಾರೆ. ಇದು ತೀವ್ರ ಚರ್ಚೆ ಹುಟ್ಟುಹಾಕಿದೆ.

ಹೊಂಬಾಳೆ ಜತೆಗೆ ರಿಷಭ್‌ ಸಮಸ್ಯೆ ಆಗಿದೆ ಅದಕ್ಕೆ ಅನ್‌ಫಾಲೋ ಮಾಡಿ ತಮ್ಮದೇ ಬ್ಯಾನರ್‌ನಿಂದ ಅಧ್ಯಾಯ ಎರಡು ಪ್ರಾರಂಭ ಎನ್ನುವ ಪೋಸ್ಟ್‌ ಮಾಡಿದ್ದಾರೆ. ಆದರೆ ಇದು ಯಾವ ಅಧ್ಯಾಯದ ಎರಡನೇ ಭಾಗ ಎಂದು ಜನ ಕನ್ಫ್ಯೂಸ್‌ ಆಗಿದ್ದಾರೆ.

ಇದು ಕಾಂತಾರ ಚಾಪ್ಟರ್‌ 2 ಅಥವಾ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಇರಬಹುದಾ ಎನ್ನಲಾಗುತ್ತಿದೆ. ಇನ್ನೂ ಕೆಲವರು ಹೊಂಬಾಳೆಯನ್ನು ಬಿಟ್ಟು ರಿಷಭ್‌ ಹೊಸ ಅಧ್ಯಾಯ ಆರಂಭಿಸಿದ್ದಾರೇನೋ ಎನ್ನುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !