ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಮನೆ ಹುಡುಕೋದು ಎಷ್ಟು ಸುಲಭವೋ ಹಾಗೆ ಮನೆ ಹುಡುಕೋದು ಕಷ್ಟ ಕೂಡ. ಒಂದು ರೂಮ್, ಒಂದು ಬಿಎಚ್ಕೆ ಸಿಕ್ಕರೂ ಸಿಗುತ್ತದೆ ಆದರೆ ಮೂರು ಬೆಡ್‌ರೂಮ್ ಇರೋ ಮನೆ ಹುಡುಕೋದು ಭಾರೀ ಕಷ್ಟ. ಇದೇ ಸಮಸ್ಯೆಯಿಂದ ಬೇಸತ್ತ ಯುವಕನೊಬ್ಬ ನಂಗೆ ಯಾರಾದ್ರೂ ಮನೆ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾನೆ.
ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದು, ಕೋರಮಂಗಲ ಅಥವಾ ಎಚ್‌ಎಸ್‌ಆರ್‌ನಲ್ಲಿ 3BHK ಮನೆ ಅಥವಾ ಫ್ಲಾಟ್ ಹುಡುಕಿಕೊಡಿ. ಮನೆ ಇಷ್ಟ ಆದ್ರೆ ತಿಂಗಳ ಬಾಡಿಗೆಯ ಅರ್ಧದಷ್ಟು ನಿಮಗೇ ಕೊಡ್ತೀನಿ ಎಂದಿದ್ದಾರೆ.
ಇದು ನನ್ನ ಲಾಸ್ಟ್ ಆಪ್ಷನ್. ನೀವು ಯಾರೇ ಆಗಿರಿ ನನಗೆ ಮನೆ ಹುಡುಕಿಕೊಡಿ.ಕೋರಮಂಗಲ, ಎಚ್‌ಎಸ್‌ಆರ್, ಕೂಡ್ಲು ಗೇಟ್ ಅಥವಾ ಹಲಸೂರಿನಲ್ಲಿ 45,000 ರೂ. ಗರಿಷ್ಠ ಬಜೆಟ್‌ನೊಂದಿಗೆ ಮನೆಗಳನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏಪ್ರಿಲ್ 1 ರೊಳಗೆ ಈ ಹೊಸ ಮನೆಗೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಮುಖಾಮುಖಿಯಾಗಿ ಸಿಗಬಹುದು ಅಥವಾ ಈ ಮನೆಯನ್ನು ನೋಡಲು ನನ್ನ ಜತೆಗೆ ಬರಬಹುದು ಎಂದು ಹೇಳಿದ್ದಾರೆ. ಸದ್ಯ ಪೋಸ್ಟ್ ವೈರಲ್ ಆಗಿದೆ.
ಸ್ವಲ್ಪ ಸಮಯದಲ್ಲೇ ಇವರಿಗೆ ಮನೆ ಸಿಕ್ಕರೂ ಸಿಗಬಹುದು..



