March 20, 2026
Friday, March 20, 2026
spot_img

ಎರಡನೇ ಪಟ್ಟಿಯಲ್ಲಿ ರಾಜಾಧ್ಯಕ್ಷರಿಗೆ ಭರ್ಜರಿ ಶಾಕ್: ಕೇರಳ ಕಾಂಗ್ರೆಸ್‌ನಲ್ಲಿ ಭಿನ್ನಮತದ ಕಾವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಮ್ಮ ರಾಜ್ಯಾಧ್ಯಕ್ಷರಿಗೆ ಟಿಕೆಟ್ ನೀಡದೆ ಮುಜುಗರ ಉಂಟುಮಾಡಿದೆ!

ಕಾಂಗ್ರೆಸ್ ರಾಜಾಧ್ಯಕ್ಷ ಸುಧಾಕರನ್, ಈ ಬಾರಿ ಕಣ್ಣೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೂ ಹೆಚ್ಚಿನ ಪ್ರಭಾವ ಹೇರಿದ್ದರು. ಆದರೆ ಅಭ್ಯರ್ಥಿಗಳ ಪಟ್ಟಿ ನೋಡಿದಾಗ ಅಚ್ಚರಿಯ ಹೆಸರು ಘೋಷಣೆಯಾಗಿದೆ.

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಸಂದೀಪ್ ವಾರಿಯರ್‌ಗೆ ಅದೃಷ್ಟ ಒಲಿದಿದ್ದು, ಕಾಸರಗೋಡಿನ ತ್ರಿಕರಿಪುರದಿಂದ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಲಾಗಿದೆ.

ಏಪ್ರಿಲ್ 9 ರಂದು ಕೇರಳದಲ್ಲಿ ಮತದಾನ ನನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !