ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಾರಕಕ್ಕೇರಿದ್ದು, ಇದರ ನಡುವೆ ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ನ್ಯಾಟೋ ರಾಷ್ಟ್ರಗಳ ಸಹಾಯ ಕೇಳಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಭಾರೀ ಮುಖಭಂಗವಾಗಿದೆ .
ನ್ಯಾಟೋ ರಾಷ್ಟ್ರಗಳು ಅಮೆರಿಕದ ಮನವಿಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದು, ಇದರ ಬೆನ್ನಲ್ಲೇ ಟ್ರಂಪ್ ,ಜಗತ್ತಿನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ನ್ಯಾಟೋ ರಾಷ್ಟ್ರಗಳೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ತಮ್ಮ ‘ಟ್ರುತ್ ಸೋಶಿಯಲ್’ನಲ್ಲಿ ಆಕ್ರೋಶ ಹೊರಹಾಕಿದ ಟ್ರಂಪ್, ಎಲ್ಲರು ತೈಲ ಬೆಲೆ ಹೆಚ್ಚುತ್ತಿದ್ದೆ ಎಂದು ಕೂಗುತ್ತಾರೆ. ಆದರೆ ಯಾರು ಕೂಡ ಇರಾನ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಬೆಂಬಲ ನೀಡುವುದಿಲ್ಲ. ಅಮೆರಿಕ ಇಲ್ಲದ ನ್ಯಾಟೋ ಕೇವಲ ಒಂದು ‘ಕಾಗದದ ಹುಲಿ’ ಎಂದು ಕಿಡಿಕಾರಿದರು.
ಎಲ್ಲರಿಗೂ ತೈಲ ಬೆಲೆ ಕಡಿಮೆಯಾಗಬೇಕು, ಆದರೆ ಯಾರು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾದ ಹೋರಾಟಕ್ಕೆ ಸಾಥ್ ನೀಡಲು ಸಿದ್ದವಿಲ್ಲ. ಆದರೆ ಅಮೆರಿಕ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಇರಾನ್ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೈಲ ಬೆಲೆ ಏರಿಕೆಗೆ ಮುಖ್ಯ ಕಾರಣ ಇರಾನ್ ಹಿಡಿತದಲ್ಲಿರುವ ಹಾರ್ಮುಜ್ ಜಲಸಂಧಿ. ಆದರೆ ಎಲ್ಲರು ದೂರು ನೀಡಲು ಸಿದ್ಧರಿದ್ದಾರೆ. ಹೋರಾಟಕ್ಕೆ ಜೊತೆಯಾಗಲು ಯಾರಿಗೂ ಮನಸ್ಸಿಲ್ಲ. ಅವರ ಈ ನಡೆಯನ್ನು ನಾನು ಮರೆಯುವುದಿಲ್ಲ. ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತೇವೆ ಎಂದು ನ್ಯಾಟೋ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.



