May 18, 2026
Monday, May 18, 2026
spot_img

ಟ್ರಂಪ್ ಮನವಿಗೆ ಡೋಂಟ್ ಕೇರ್: ಯುದ್ಧ ವಿಮಾನ ಲ್ಯಾಂಡಿಂಗ್ ಗೆ ಅನುಮತಿ ನಿರಾಕರಿಸಿದ ಶ್ರೀಲಂಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಇಳಿಸಲು ಶ್ರೀಲಂಕಾ ಅನುಮತಿ ನಿರಾಕರಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಇಂದು ಶ್ರೀಲಂಕಾದ ಸಂಸತ್ತಿನಲ್ಲಿ ಮಾಹಿತಿ ನೀಡಿದ ಅಧ್ಯಕ್ಷ ಅನುರ ಕುಮಾರ ದಿಸಾನಾಯ ಅವರು, ಮಾರ್ಚ್ ನಲ್ಲಿ ಅಮೆರಿಕದ ಯುದ್ಧವಿಮಾನಗಳನ್ನು ಮಟ್ಟಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ಅನುಮತಿ ಕೇಳಿದ್ದರು. ಆದರೆ ನಾವು ಅವರ ಮನವಿಯನ್ನು ತಿರಸ್ಕರಿಸಿದ್ದೇವೆ ಎಂದು ತಿಳಿಸಿದರು.

ಜಿಬೌಟಿ ನೆಲೆಯಿಂದ ಹೊರಟಿದ್ದ ಅಮೆರಿಕದ ಯುದ್ಧವಿಮಾನಗಳು ಮಾರ್ಚ್ 4 ಹಾಗು 8 ರಂದು ತಮ್ಮ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಮನವಿ ಮಾಡಿತ್ತು. ಆದರೆ ನಾವು ಯಾವುದೇ ಏಕ ನಿರ್ಧಾರ ಮಾಡದೇ ತಟಸ್ಥ ಉದ್ದೇಶದಿಂದ ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದರು.

ನಾವು ಯಾವುದೇ ದೇಶದ ಒತ್ತಡಕ್ಕೆ ಸಿಲುಕಲು ಬಯಸುವುದಿಲ್ಲ. ನಮ್ಮ ಉದ್ದೇಶ ತಟಸ್ಥತೆಯನ್ನು ಕಾಪಾಡಿಕೊಳ್ಳುವುದಾಗಿದೆ ಎಂದು ಕುಮಾರ ದಿಸಾನಾಯ ತಿಳಿಸಿದರು.

ಈ ಹಿಂದೆ ಇರಾನ್ ಕೂಡ ಕರೆ ಮಾಡಿ ಯುದ್ಧ ನೌಕೆಗಳಿಗೆ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡುವಂತೆ ಮನವಿ ಮಾಡಿತ್ತು. ಆದರೆ ನಾವು ಸದ್ಯ ಹಡಗು ನಿಲ್ಲಿಸುವ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಹಾಗಾಗಿ ಅಮೆರಿಕದ ಮನವಿಗೂ ಅನುಮತಿ ನೀಡಿಲ್ಲ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !