March 21, 2026
Saturday, March 21, 2026
spot_img

ಹಿಂದೂ ಮಹಾಸಾಗರದ ಡೀಗೊ ಗಾರ್ಸಿಯಾ ದ್ವೀಪದ ಮೇಲೆ ಇರಾನ್‌ ಕ್ಷಿಪಣಿ ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇರಾನ್‌ ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಯುಕೆ ಮಿಲಿಟರಿ ನೆಲೆಯಿರುವ ಅತ್ಯಂತ ರಹಸ್ಯ ದ್ವೀಪವಾದ ಡಿಯಾಗೋ ಗಾರ್ಸಿಯಾ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಯಿಂದ ದಾಳಿ ನಡೆಸಿದೆ.

ಈ ಕುರಿತು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದ್ದು , ಇರಾನ್ ನಿಂದ ಸುಮಾರು 4,000 ಕಿಲೋಮೀಟರ್ ದೂರ ಹಿಂದೂ ಮಹಾಸಾಗರದಲ್ಲಿ ಇರುವ ಡಿಯಾಗೋ ಗಾರ್ಸಿಯಾ ದ್ವೀಪವನ್ನು ಗುರಿಯಾಗಿಸಿ 2 ಮಧ್ಯಮ ರೇಂಜ್‌ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದೆ ಎಂದು ತಿಳಿಸಿದೆ. ಆದರೆ ಎರಡೂ ಕ್ಷಿಪಣಿಗಳು ತನ್ನ ಗುರಿಯನ್ನು ತಲುಪಲಿಲ್ಲ .

ಇರಾನ್ ಹಿಡಿತದಿಂದ ಹಿರ್ಮುಜ್‌ ಜಲಸಂಧಿಯನ್ನು ತೆರವುಗೊಳಿಸಲು ಅಮೆರಿಕಕ್ಕೆ ಬೆಂಬಲ ನೀಡುವುದಾಗಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಘೋಷಿಸಿದ್ದು, ಇದರ ಬೆನ್ನಿಗೆ ಈ ದಾಳಿ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !