September 30, 2026
Wednesday, September 30, 2026
spot_img

ಪೊಲೀಸ್ ಕಮಾಂಡೋ ಶಿಬಿರದ ಮೇಲೆ ಶಂಕಿತ ಉಗ್ರರ ಹಠಾತ್ ದಾಳಿ: ಚುನಾವಣೆ‌ ಹೊಸ್ತಿಲಲ್ಲಿರುವ ಅಸ್ಸಾಂಗೆ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು, ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಗೊಂಡಿವೆ. ಇದರ ಮದ್ಯೆ ಶಂಕಿತ ಉಗ್ರರ ಗುಂಪೊಂದು ಅಸ್ಸಾಂ-ಅರುಣಾಚಲ ಗಡಿಯ ಜಗುನ್‌ನಲ್ಲಿರುವ ಪೊಲೀಸ್ ಕಮಾಂಡೋ ಶಿಬಿರದ ಮೇಲೆ ದಾಳಿ ನಡೆಸಿದೆ.

ನಿಷೇಧಿತ ಉಲ್ಫಾ (ಐ) ಶಂಕಿತ ಉಗ್ರ ಸಂಘಟನೆಯು ಪೊಲೀಸರ ಶಿಬಿರದ ಮೇಲೆ ಗ್ರೆನೇಡ್ ಮತ್ತು ಆರ್‌ಪಿಜಿ ಬಳಸಿ ದಾಳಿ ನಡೆಸಿದ್ದು, ಈ ವೇಳೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಶಂಕಿತ ಉಗ್ರರ ದಾಳಿಗೆ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದು, ಕಾಡಿನತ್ತ ಪರಾರಿಯಾಗಿದ್ದಾರೆ.

ದಾಳಿಯ ವೇಳೆ ಗಾಯಗೊಂಡ ಪೊಲೀಸರನ್ನು ಚಿತ್ರಂಜನ್ ಮಿಲಿ, ಜೋರ್ಹತ್‌ನ ದೇಬಾಶಿಶ್ ಬೋರಾ, ಚಾಬುವಾದ ರಬಿ ಘರ್ ಮತ್ತು ಗೋಲ್‌ಪಾರಾದ ಜಂಬೂಷ್ ಮರಕ್ ಎಂದು ಗುರುತಿಸಲಾಗಿದೆ. ದಿಬ್ರುಗಢದ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಯ ಬೆನ್ನಲ್ಲೇ ಅಸ್ಸಾಂ-ಅರುಣಾಚಲ ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

Must Read