September 30, 2026
Wednesday, September 30, 2026
spot_img

ಪುದುಚೆರಿಗೆ ಕಾಲಿಟ್ಟ ನಟ ವಿಜಯ್ ಪಕ್ಷ: ಚುನಾವಣಾ ಅಖಾಡಕ್ಕೆ 30 ಅಭ್ಯರ್ಥಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರಾಡಳಿತ ಪ್ರದೇಶ ಪುದುಚೆರಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ತಮಿಳು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಇಲ್ಲೂ ಏಕಾಂಗಿ ಸ್ಪರ್ಧೆಗೆ ಇಳಿದಿದೆ.

ಪಕ್ಷವು ಚುನಾವಣಾ ಅಖಾಡಕ್ಕೆ ತನ್ನ 30 ಅಭ್ಯರ್ಥಿಗಳನ್ನು ಇಳಿಸಿ ಉಳಿದ ರಾಜಕೀಯ ಪಕ್ಷಗಳಿಗೆ ಠಕ್ಕರ್ ನೀಡಿದೆ.

ಟಿವಿಕೆ, ಮಂಗಳಂ ಮತ್ತು ಕದಿರ್ಕಾಮಮ್‌ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ತಿರುಭುವನೈ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಮಿಸ್ ಆಗಿದ್ದ ಎಕೆ ಸಾಯಿ ಜೆ ಸರವಣನ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ.

ಟಿವಿಕೆಯಿಂದ ಈ ಬಾರಿ ಪುದುಚೆರಿಯ ಮಾಜಿ ಪೊಲೀಸ್ ಮಹಾನಿರ್ದೇಶಕ ವಿ ಜೆ ಚಂದ್ರನ್ ಕೂಡ ಸ್ಪರ್ಧಿಸಲಿದ್ದಾರೆ.

ಪುದುಚೇರಿಯಲ್ಲಿ 2021ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಗೆದ್ದು ಸರಕಾರ ರಚನೆ ಮಾಡಿಕೊಂಡಿತ್ತು. ಏಪ್ರಿಲ್ 9ರಂದು ಮತದಾನ ನಡೆ ಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.

Must Read