ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯಿಂದಾಗಿ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವುದು ಜಾಣತನದ ಲಕ್ಷಣ. ಇಂತಹ ಸಮಯದಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ, ಆಧುನಿಕ ರೂಪ ಪಡೆದಿರುವ ‘ಗೋಬರ್ ಗ್ಯಾಸ್’ ಅಥವಾ ‘ಬಯೋ ಗ್ಯಾಸ್’ ಸಾಮಾನ್ಯ ಜನರಿಗೆ ವರದಾನವಾಗಬಲ್ಲದು.
ಮನೆಯಲ್ಲಿ ಎರಡು ಹಸುಗಳಿದ್ದರೆ ಸಾಕು, ದಿನವಿಡೀ ಅಡುಗೆ ಮಾಡಲು ಬೇಕಾದ ಗ್ಯಾಸ್ ಉಚಿತವಾಗಿ ಸಿಗುತ್ತದೆ. ನೀವು ತಿಂಗಳು ತಿಂಗಳು ಸಾವಿರಾರು ರೂಪಾಯಿ ಹಣವನ್ನು ಎಲ್‌ಪಿಜಿಗಾಗಿ ಸುರಿಯಬೇಕಿಲ್ಲ.

ಇದು ಹೊಗೆ ರಹಿತವಾಗಿರುವುದರಿಂದ ಮನೆಯ ಹೆಣ್ಣುಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಡುಗೆ ಮನೆಯ ಗೋಡೆಗಳು ಮಸಿ ಹಿಡಿಯುವುದಿಲ್ಲ.
ಗ್ಯಾಸ್ ಉತ್ಪತ್ತಿಯಾದ ನಂತರ ಹೊರಬರುವ ಸಗಣಿ ದ್ರಾವಣವು ಸಾಮಾನ್ಯ ಸಗಣಿಗಿಂತಲೂ ಶಕ್ತಿಶಾಲಿ ಸಾವಯವ ಗೊಬ್ಬರವಾಗಿರುತ್ತದೆ. ಇದನ್ನು ತೋಟಕ್ಕೆ ಬಳಸಿದರೆ ಇಳುವರಿ ದುಪ್ಪಟ್ಟಾಗುತ್ತದೆ.

ಬರಿ ಸಗಣಿ ಮಾತ್ರವಲ್ಲದೆ, ಮನೆಯ ಹಸಿ ಕಸ, ತರಕಾರಿ ಸಿಪ್ಪೆ ಮತ್ತು ಹಾಳಾದ ಆಹಾರ ಪದಾರ್ಥಗಳನ್ನು ಕೂಡ ಇದಕ್ಕೆ ಹಾಕಬಹುದು. ಇದರಿಂದ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬಹುದು.
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಯೋ ಗ್ಯಾಸ್ ಪ್ಲಾಂಟ್ ಅಳವಡಿಸಲು ಭಾರಿ ಸಬ್ಸಿಡಿ ನೀಡುತ್ತಿವೆ. ನೀವು ನಿಮ್ಮ ಹತ್ತಿರದ ಪಂಚಾಯತ್ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿದರೆ ಅತೀ ಕಡಿಮೆ ವೆಚ್ಚದಲ್ಲಿ ಇದನ್ನು ಅಳವಡಿಸಿಕೊಳ್ಳಬಹುದು.



