October 16, 2026
Friday, October 16, 2026
spot_img

ಮಳೆ ಬಿದ್ರೂ ಬೀದರ್‌ ಜನಕ್ಕೆ ಪಾನಿಪುರಿ ತಿನ್ನೋ ಭಾಗ್ಯ ಇಲ್ಲವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುದ್ಧದ ಪರಿಣಾಮವಾಗಿ ದೊಡ್ಡ ದೊಡ್ಡ ಹೊಟೇಲ್‌ಗಳ ಮೆನ್ಯು ಬದಲಾಗಿ, ಜನ ಕಡಿಮೆಯಾಗಿದ್ದಾರೆ. ಆದರೆ ಇತ್ತ ಸಣ್ಣ ಪಾನಿಪುರಿ ಸ್ಟಾಲ್‌ಗಳು ಅಂಗಡಿ ತೆಗೆಯಲಾರದೆ, ದಿನದ ವ್ಯಾಪಾರ ಇಲ್ಲದೆ ಕಂಗಾಲಾಗಿವೆ.

ಗಡಿ ಜಿಲ್ಲೆ ಬೀದರ್‌ನಲ್ಲಿ ಮಳೆಯಾಗುತ್ತಿದೆ. ಮಳೆ ವಾತಾವರಣಕ್ಕೆ ಹೊರಗೆ ಬರೋ ಜನ ಪಾನಿಪುರಿ ಮಸಾಲ ಪುರಿಗಾಗಿ ಸ್ಟಾಲ್‌ಗಳನ್ನು ಹುಡುಕುತ್ತಿದ್ದಾರೆ. ಆದರೆ ಯಾವುದೇ ಅಂಗಡಿ ಓಪನ್‌ ಇಲ್ಲದೆ ಲಾಕ್‌ಡೌನ್‌ ಫೀಲಿಂಗ್‌ ಅನುಭವಿಸುತ್ತಿದ್ದಾರೆ.

ಸಿಲಿಂಡರ್‌ ಸಿಗದೇ ನಾಲ್ಕೈದು ದಿನದಿಂದ ಪಾನಿಪುರಿ ಅಂಗಡಿಗಳು ಬಂದ್‌ ಆಗಿವೆ. ನಿತ್ಯದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ವ್ಯಾಪಾರಿಗಳಿಗೆ ದಿಕ್ಕು ತೋಚದಂತಾಗಿದೆ. ಈ ದರಿದ್ರ ಯುದ್ಧ ಎಂದಿಗೆ ಕೊನೆಯಾಗುತ್ತದೋ ಎಂದು ಸಣ್ಣ ವ್ಯಾಪಾರಿಗಳು ಹಿಡಿ ಹಿಡಿ ಶಾಪ ಹಾಕಿದ್ದಾರೆ.

Must Read