March 24, 2026
Tuesday, March 24, 2026
spot_img

PSLನಲ್ಲಿ ಆಟ ಆಡಿದ್ರೆ ಹುಷಾರ್..! ವಿದೇಶಿ ಆಟಗಾರರಿಗೆ ಪಾಕ್ ಉಗ್ರ ಸಂಘಟನೆಯಿಂದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸೂಪರ್ ಲೀಗ್ 2026 ಆರಂಭಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ವಿದೇಶಿ ಆಟಗಾರರ ಲಭ್ಯತೆ ಕಡಿಮೆಯಿರುವ ನಡುವೆಯೇ, ಭದ್ರತಾ ಆತಂಕಗಳು ಮತ್ತಷ್ಟು ಗಂಭೀರವಾಗಿವೆ.

ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ದೇಶದಲ್ಲಿ ಅನಿಲ ಕೊರತೆ ಉಂಟಾಗಿದ್ದು, ಪಂದ್ಯಾವಳಿಯನ್ನು ಸೀಮಿತ ಮೈದಾನಗಳಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಈ ನಡುವೆ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಅಹ್ರಾರ್ ವಿದೇಶಿ ಆಟಗಾರರಿಗೆ ನೇರ ಬೆದರಿಕೆ ಹಾಕಿದೆ.

ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬರಬಾರದು ಎಂದು ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ಈ ಸಂಘಟನೆ, ಎಚ್ಚರಿಕೆಯನ್ನು ಲೆಕ್ಕಿಸದೇ ಬಂದರೆ ಆಟಗಾರರ ಸುರಕ್ಷತೆಗಾಗಿ ತಾವು ಜವಾಬ್ದಾರರಲ್ಲ ಎಂದು ಹೇಳಿದೆ. ಪಂದ್ಯಗಳನ್ನು ಅಡ್ಡಿಪಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಕೂಡ ಎಚ್ಚರಿಸಿದೆ.

ಇದನ್ನೂ ಓದಿ:

ಇದರಿಂದಾಗಿ ಭದ್ರತೆ ಕುರಿತು ಆತಂಕ ಹೆಚ್ಚಾದರೂ, ಬಾಂಗ್ಲಾದೇಶ ತನ್ನ ಆಟಗಾರರಿಗೆ ಭಾಗವಹಿಸಲು ಅನುಮತಿ ನೀಡಿದೆ. ಕೆಲವು ಪ್ರಮುಖ ಆಟಗಾರರು ಈಗಾಗಲೇ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧರಾಗಿದ್ದಾರೆ.

ಒಟ್ಟಾರೆ, ಭದ್ರತಾ ಸಮಸ್ಯೆಗಳು ಹಾಗೂ ಜಾಗತಿಕ ಪರಿಸ್ಥಿತಿಯಿಂದ ಈ ಬಾರಿಯ ಪಿಎಸ್‌ಎಲ್ ಆಯೋಜನೆ ಸವಾಲಿನದ್ದಾಗಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !