September 18, 2026
Friday, September 18, 2026
spot_img

TOWING | ಗಾಡಿ ಯಾರೂ ಟೋ ಮಾಡ್ಕೊಂಡು ಹೋಗ್ಬಾರ್ದು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ

ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಟೋಯಿಂಗ್‌ ಆರಂಭವಾಗಿದೆ. ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವವರು ಈಗ ಎಚ್ಚೆತ್ತುಕೊಳ್ಳಬೇಕಿದೆ. ಟೋಯಿಂಗ್‌ ಆಗದಂತೆ ತಡೆಗಟ್ಟಲು ಹೀಗೆ ಮಾಡಿ..

ನಿಮ್ಮ ಕಣ್ಣ ಮುಂದೆಯೇ ಇರುವ ಸೈನ್‌ಗಳನ್ನು ಇಗ್ನೋರ್‌ ಮಾಡಬೇಡಿ. ನೋ ಪಾರ್ಕಿಂಗ್‌ ಟೋ ಅವೇ ಸೈನ್‌ಗಳ ಮೇಲೆ ಗಮನ ಇರಲಿ.

ನೂರು ರೂಪಾಯಿ ಖರ್ಚಾದರೂ ಪರವಾಗಿಲ್ಲ, ನಾಲ್ಕು ಹೆಜ್ಜೆ ನಡೆದರೂ ಪರವಾಗಿಲ್ಲ. ಪಾರ್ಕಿಂಗ್‌ ಹುಡುಕಿ ಅಲ್ಲಿಯೇ ಗಾಡಿ ಹಾಕಿ.

ಬೇರೆಯವರ ಮನೆಗಳ ಮುಂದೆ, ಕಮರ್ಷಿಯಲ್‌ ಬಿಲ್ಡಿಂಗ್‌ಗಳ ಮುಂದೆ ಗಾಡಿ ನಿಲ್ಲಿಸಬೇಡಿ. ಫುಟ್‌ಪಾತ್‌ನಿಂದ ದೂರವೇ ಇರಿ.

ಪಾರ್ಕಿಂಗ್‌ ದಿನಾಂಕ, ಪಾರ್ಕಿಂಗ್‌ ಸಮಯದ ಬೋರ್ಡ್‌ ಚೆಕ್‌ ಮಾಡಿ. ಆ ಬದಿಯೇ ಪಾರ್ಕ್‌ ಮಾಡಿ.

ರಸ್ತೆ ಬದಿ ಪಾರ್ಕ್‌ ಮಾಡಿದ್ದರೆ ನಿಮ್ಮ ಗಾಡಿಯಿಂದ ಯಾರಿಗಾದರೂ ತೊಂದರೆ ಆಗ್ಯಿದ್ಯಾ? ಟ್ರಾಫಿಕ್‌ ಆಗೋಕೆ ದಾರಿ ಆಗಿದ್ಯಾ ಮೊದಲು ನೋಡ್ಕೊಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !