October 9, 2026
Friday, October 9, 2026
spot_img

ಪ್ರಧಾನಿ ನರೇಂದ್ರ ಮೋದಿಗೆ 76ನೇ ಜನ್ಮದಿನದ ಶುಭಾಶಯ ತಿಳಿಸಿದ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ 76ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೇಶದಾದ್ಯಂತ ಗಣ್ಯರು ಹಾಗೂ ಸಾರ್ವಜನಿಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಚಿತ್ರರಂಗದ ಪ್ರಮುಖ ನಟ ನಟಿಯರು ಕೂಡ ಪ್ರಧಾನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ದೇಶಕ್ಕೆ ಸದಾ ಸ್ಫೂರ್ತಿಯಾಗಿರಿ ಎಂದ ಕಿಂಗ್ ಖಾನ್

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರಧಾನಿ ಮೋದಿಯವರಿಗೆ ಶುಭಾಶಯ ತಿಳಿಸಿದ್ದಾರೆ. “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೆ ಸುದೀರ್ಘ ಆಯುಷ್ಯ, ಉತ್ತಮ ಆರೋಗ್ಯ, ಸಂತೋಷ ಮತ್ತು ಸಾರ್ಥಕತೆ ಸಿಗಲಿ. ನಮ್ಮ ದೇಶಕ್ಕೆ ಸದಾ ಸ್ಫೂರ್ತಿ ತುಂಬುವ ಶಕ್ತಿ ಮತ್ತು ಸಕಾರಾತ್ಮಕತೆ ನಿಮ್ಮಲ್ಲಿ ಎಂದಿಗೂ ಹೀಗೆಯೇ ಇರಲಿ” ಎಂದು  ಹಾರೈಸಿದ್ದಾರೆ.

ಸೇವೆಯ ಸಂಕಲ್ಪ ತೊಟ್ಟ ಅಕ್ಷಯ್ ಕುಮಾರ್

ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿಯವರ ಜನ್ಮದಿನವನ್ನು ಸೇವಾ ಮನೋಭಾವದಿಂದ ಆಚರಿಸುವ ಕರೆ ನೀಡಿದ್ದಾರೆ. “ಇಂದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ಜನ್ಮದಿನ, ಈ ದಿನವನ್ನು ಸೇವೆಯ ಸಂಕಲ್ಪದೊಂದಿಗೆ ಆಚರಿಸಲಾಗುತ್ತಿದೆ. ಹುಟ್ಟುಹಬ್ಬವನ್ನು ಆಚರಿಸಲು ಇದಕ್ಕಿಂತ ಸುಂದರವಾದ ಹಾದಿ ಮತ್ತೊಂದಿಲ್ಲ ಎಂದು ನಾನು ನಂಬುತ್ತೇನೆ. ಯಾರಾದರೂ ಒಬ್ಬರಿಗೆ ನೆರವಾಗುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು, ಮುಖದಲ್ಲಿ ನಗು ತರುವುದು… ಇಷ್ಟೇ ಸರಳ ಸಂಕಲ್ಪ ನಮ್ಮದಾಗಲಿ. ಹ್ಯಾಪಿ ಬರ್ತ್‌ಡೇ ಮೋದಿ ಜಿ, ನಮ್ಮ ರಾಷ್ಟ್ರಕ್ಕೆ ಸದಾ ಸ್ಫೂರ್ತಿಯಾಗಿರಿ” ಎಂದು ಬರೆದುಕೊಂಡಿದ್ದಾರೆ.

ಕೋಟ್ಯಂತರ ಜನರಿಗೆ ಸ್ಫೂರ್ತಿ

ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್‌ಲಾಲ್ ಅವರು ಪ್ರಧಾನಿಗಳಿಗೆ ಶುಭ ಕೋರುತ್ತಾ, “ನಮ್ಮ ದೇಶದ ಪ್ರಗತಿಗಾಗಿ ನೀವು ಶ್ರಮಿಸುತ್ತಿರುವ ರೀತಿ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ. ಈ ವರ್ಷ ನಿಮಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ದೇಶದ ಸೇವೆಯಲ್ಲಿ ನಿರಂತರ ಯಶಸ್ಸನ್ನು ತರಲಿ” ಎಂದು ಆಶಿಸಿದ್ದಾರೆ.

ಶುಭ ಹಾರೈಸಿದ ಕಂಗನಾ, ಜಾಕಿ ಮತ್ತು ಶಿಲ್ಪಾ ಶೆಟ್ಟಿ

ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು ಶುಭಕೋರಿದ್ದಾರೆ. ಇವರ ಜತೆಗೆ ಹಿರಿಯ ನಟ ಜಾಕಿ ಶ್ರಾಫ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡು ಶುಭ ಹಾರೈಸಿದರೆ, ನಟಿ ಶಿಲ್ಪಾ ಶೆಟ್ಟಿ ಅವರು, “ನಮ್ಮ ದೇಶವನ್ನು ಮುನ್ನಡೆಸುತ್ತಿರುವ ನಿಮಗೆ ಉತ್ತಮ ಆರೋಗ್ಯ ಹಾಗೂ ನಿರಂತರ ಯಶಸ್ಸು ಸಿಗಲಿ” ಎಂದು ಹಾರೈಸಿದ್ದಾರೆ.

ಅದೇ ರೀತಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಪ್ರಧಾನಿ  ಮೋದಿಗೆ ಶುಭ ಕೋರಿರುವ ಅವರು, ʼಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಮ್ಮ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿರುವ ನಿಮ್ಮ ನಾಯಕತ್ವ ಕೋಟ್ಯಂತರ ಜನರಿಗೆ ಸದಾ ಸ್ಫೂರ್ತಿ. ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ದೇಶದ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆʼ ಎಂದು ತಿಳಿಸಿದ್ದಾರೆ.

Must Read