March 24, 2026
Tuesday, March 24, 2026
spot_img

ಅಮೆರಿಕಾದ ಅತೀ ದೊಡ್ಡ ತೈಲ ಘಟಕದಲ್ಲಿ ನಿಗೂಢ ಸ್ಫೋಟ: ಕೊಲ್ಲಿ ಯುದ್ಧದ ನಡುವೆ ಬೆಚ್ಚಿಬಿದ್ದ ದೈತ್ಯ ರಾಷ್ಟ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್‌ನ ವ್ಯಾಲೆರೊ ಆಯಿಲ್ ರಿಫೈನರಿಯಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡದ ನಡುವೆಯೇ ನಡೆದಿರುವ ಈ ಘಟನೆ ಆತಂಕ ಹೆಚ್ಚಿಸಿದೆ.

ಸ್ಥಳಿಯಾಡಳಿತಗಳ ಮಾಹಿತಿ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಸ್ಫೋಟದ ಘಟಕದಲ್ಲಿ ಭಾರಿ ಬೆಂಕಿ ಹಾಗೂ ಹೊಗೆ ಆವರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

ಈ ಘಟನೆ ಹೂಸ್ಟನ್‌ನಿಂದ 145 ಕಿ.ಮೀ ದೂರದಲ್ಲಿ ನಡೆದಿದೆ. ಪೋರ್ಟ್ ಆರ್ಥರ್ ವ್ಯಾಲೆರೊ ಆಯಿಲ್ ರಿಫೈನರಿ ಅಮೆರಿಕದ ಅತೀ ದೊಡ್ಡ ರಿಫನರಿ ಘಟಕವಾಗಿದ್ದು, ಇಲ್ಲಿ ಪ್ರತಿದಿನ 4,35,000 ಬ್ಯಾರೆಲ್ ಕಚ್ಚಾತೈಲ ತಯಾರಾಗುತ್ತದೆ.


ಈ ಕೃತ್ಯದ ಹಿಂದೆ ಇರಾನ್ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ಆರಂಭಾವಗಿದೆ. ಜೊತೆಗೆ ಈ ಘಟನೆಯಿಂದ ಅಮೆರಿಕದಲ್ಲೂ ಇಂಧನ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !