September 30, 2026
Wednesday, September 30, 2026
spot_img

ಹಾರ್ಮುಜ್ ಜಲಸಂಧಿ ದಾಟಿದೆ ಮತ್ತೆರಡು ಹಡಗು: ಇನ್ನೆರಡು ದಿನದಲ್ಲಿ ನವಮಂಗಳೂರು ಬಂದರಿಗೆ 45 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ


ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 92,600 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತಕ್ಕೆ ಆಗಮಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಯುನೈಟೆಟ್ ಅರಬ್ ಎಮಿರೇಟ್ಸ್‌ನ ರುವೈಸ್‌ನಿಂದ 45 ಸಾವಿರ ಮೆಟ್ರಿಕ್ ಎಲ್‌ಪಿಜಿ ಹೊತ್ತ ಫೈನ್‌ಗ್ಯಾಸ್ ಹಡಗು ಇದೇ 27 ರಂದು ನವಮಂಗಳೂರು ಬಂದರಿಗೆ ಆಗಮಿಸಲಿದೆ ಎಂದು ಬಂದರುಗಳು, ಹಡಗು ಸಾಗಾಣೆ ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾಹಿತಿ ನೀಡಿದ್ದಾರೆ.

ಇನ್ನೊಂದು ಹಡಗು ಜಗ್‌ವಸಂತ್ ಇದೇ 26 ರಂದು ಗುಜರಾತ್ ಕಾಂಡ್ಲಾ ಬಂದರಿಗೆ ಆಗಮಿಸಲಿದೆ.

Must Read