March 25, 2026
Wednesday, March 25, 2026
spot_img

ಚಿನ್ನಸ್ವಾಮಿ ಅಂಗಳದಲ್ಲಿ ಮೃತ್ಯುಂಜಯ ಹೋಮ: ಮೃತ ಅಭಿಮಾನಿಗಳಿಗೆ ಕೆಎಸ್‌ಸಿಎ ಭಾವುಕ ಗೌರವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ! ಇನ್ನೇನು ಮೂರೇ ದಿನ ಬಾಕಿ ಇರುವಾಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಕ್ತಿಭಾವದ ವಾತಾವರಣ ಮನೆ ಮಾಡಿತ್ತು. ಕಳೆದ ವರ್ಷದ ಆ ಕರಾಳ ಘಟನೆಯ ನೆನಪು ಇಂದಿಗೂ ಮಾಸಿಲ್ಲ. 2025ರ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದು ಇಡೀ ಕ್ರಿಕೆಟ್ ಲೋಕವನ್ನೇ ಕಂಗೆಡಿಸಿತ್ತು.

ಈ ಬಾರಿ ಅಂತಹ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಸ್ಟೇಡಿಯಂನಲ್ಲಿ ಗಣಹೋಮ, ಮೃತ್ಯುಂಜಯ ಹೋಮ ಹಾಗೂ ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದಲ್ಲಿ ನಡೆದ ಈ ಪೂಜೆಯಲ್ಲಿ, ಕ್ರೀಡಾಂಗಣದ ಗೇಟ್‌ಗಳಿಗೆ ಕುಂಬಳಕಾಯಿ ಒಡೆದು ದೃಷ್ಟಿ ತೆಗೆಯುವ ಮೂಲಕ ಶುಭ ಕೋರಲಾಯಿತು.

ಮೃತಪಟ್ಟ 11 ಅಭಿಮಾನಿಗಳ ನೆನಪಿಗಾಗಿ ಸ್ಟೇಡಿಯಂ ಆವರಣದಲ್ಲೇ ‘ಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025’ ಎಂಬ ಸ್ಮಾರಕ ನಿರ್ಮಿಸಲಾಗಿದೆ.

ಇನ್ಮುಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ಅಥವಾ ಇಂಟರ್ನ್ಯಾಷನಲ್ ಮ್ಯಾಚ್‌ಗಳಲ್ಲಿ 11 ಸೀಟುಗಳನ್ನು ಆ ಮೃತ ಅಭಿಮಾನಿಗಳ ನೆನಪಿಗಾಗಿ ಮೀಸಲಿಡಲಾಗುತ್ತದೆ. ಈ ಸೀಟುಗಳ ಟಿಕೆಟ್ ಎಂದು ಮಾರಾಟವಾಗುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !