October 9, 2026
Friday, October 9, 2026
spot_img

ಆ.15ಕ್ಕೆ ಬೆಂಗಳೂರಲ್ಲಿ ‘ಟಾಕ್ಸಿಕ್’ ಬಿಗ್ ಇವೆಂಟ್: ಜಾಗತಿಕ ಮಾಧ್ಯಮಗಳೇ ಸಿಲಿಕಾನ್ ಸಿಟಿಗೆ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಹೈಪ್ ಸೃಷ್ಟಿಸಿದೆ. ಈ ಪ್ಯಾನ್-ವರ್ಲ್ಡ್ ಸಿನಿಮಾ ಆಗಸ್ಟ್ 26ರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಬೆಂಗಳೂರಲ್ಲೇ ಜಾಗತಿಕ ಮಟ್ಟದ ಬಿಗ್ ಇವೆಂಟ್!

ಚಿತ್ರ ಬಿಡುಗಡೆಗೆ ಕೇವಲ 11 ದಿನ ಬಾಕಿ ಇರುವಾಗ, ಅಂದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹೈ-ಪ್ರೊಫೈಲ್ ಈವೆಂಟ್‌ಗಾಗಿ ಭಾರತದ ಪ್ರಮುಖ ಪತ್ರಕರ್ತರು ಮಾತ್ರವಲ್ಲದೆ, ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳು ಕೂಡ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮಾತು ಉಳಿಸಿಕೊಂಡ ರಾಕಿ ಭಾಯ್

“ನಾನು ಬೇರೆ ಭಾಷೆಗೆ ಹೋಗಲ್ಲ, ಅವರನ್ನೇ ಇಲ್ಲಿಗೆ ಕರೆಸುತ್ತೇನೆ” ಎಂದು ಯಶ್ ಹಿಂದೆ ಹೇಳಿದ್ದ ಮಾತು ಈಗ ನಿಜವಾಗುತ್ತಿದೆ. ಮುಂಬೈ, ಹೈದರಾಬಾದ್ ಅಥವಾ ವಿದೇಶಗಳಿಗೆ ಹೋಗುವ ಇಂದಿನ ಟ್ರೆಂಡ್ ಬದಲಿಸಿ, ಜಾಗತಿಕ ಮಾಧ್ಯಮಗಳನ್ನು ಬೆಂಗಳೂರಿಗೇ ಕರೆತರುವ ಮೂಲಕ ಯಶ್ ಕನ್ನಡ ಚಿತ್ರರಂಗದ ಗತ್ತನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

ಇಂಗ್ಲಿಷ್‌ನಲ್ಲೂ ರಿಲೀಸ್ ಆಗಲಿದೆ ‘ಟಾಕ್ಸಿಕ್’

‘ಕೆಜಿಎಫ್’ ಯಶಸ್ಸಿನ ನಂತರ ಬರುತ್ತಿರುವ ಈ ಸಿನಿಮಾ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್‌ನಲ್ಲೂ ರಿಲೀಸ್ ಆಗುತ್ತಿರುವುದು ವಿಶೇಷ. ಡ್ರಗ್ ಮಾಫಿಯಾ ಹಾಗೂ ಆಕ್ಷನ್ ಹಿನ್ನೆಲೆಯ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಿನಿಮಾ ಸಿದ್ಧವಾಗಿದೆ.

Must Read