July 28, 2026
Tuesday, July 28, 2026
spot_img

ಪೆಟ್ರೋಲ್, ಡೀಸೆಲ್ ಕೊರತೆ ಕುರಿತು ವದಂತಿ: ತೈಲ ಕಂಪನಿಗಳು ಕೊಟ್ಟ ಸ್ಪಷ್ಟನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತಿಗೆ ತೈಲದ ಹೊಡೆತ ಬಿದ್ದಿದೆ. ಆದರೆ ಭಾರತಕ್ಕೆ ಇದರ ನಡುವೆಯೂ ಈಗಾಗಲೇ ಹಾರ್ಮುಜ್​ ಜಲಸಂಧಿ ದಾಟಿ ಹಡಗುಗಳು ಬರುತ್ತಿದ್ದು, ಹೀಗಾಗಿ ಸದ್ಯಕ್ಕೆ ಯಾವುದೇ ರೀತಿಯ ತೈಲದ ಕೊರತೆ ಇಲ್ಲ ಎಂದು ತೈಲ ಕಂಪನಿಗಳು ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂಧನ ಕೊರತೆಯ ಕುರಿತು ವಂದತಿಗಳು ಹರಡುತ್ತಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ದೇಶದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಜನರಲ್ಲಿ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಹಾಗೂ ಆತುರದಿಂದ ಖರೀದಿಸಬೇಡಿ ಎಂದು ಮನವಿ ಮಾಡಿದೆ.

ದೇಶದಲ್ಲಿ ಸದ್ಯ ಪೆಟ್ರೋಲ್, ಡೀಸೆಲ್ ಪೂರೈಕೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ಸಂಗ್ರಹವಿದ್ದು, ಯಾವುದೇ ಕೊರತೆಯಾಗಿಲ್ಲ ಎಂದು ತಿಳಿಸಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕೂಡ ಜನರಲ್ಲಿ ಮನವಿ ಮಾಡಿದ್ದು , ದೇಶದಲ್ಲಿ ಯಾವುದೇ ಇಂಧನಗಳ ಕೊರತೆ ಇಲ್ಲ. ಎಲ್ಲಾ ಕಡೆಗಳಲ್ಲೂ ಸಿಗುತ್ತಿದ್ದು, ಯಾವುದೇ ರೀತಿಯ ಸುಳ್ಳು ವರದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !