March 26, 2026
Thursday, March 26, 2026
spot_img

ಬಾಂಗ್ಲಾದಲ್ಲಿ ಭೀಕರ ಅಪಘಾತ: ನದಿಗೆ ಉರುಳಿದ ಬಸ್‌, 23 ಜನರ ದುರ್ಮ*ರಣ, ಹಲವರು ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಬೋಟ್‌ಗೆ ಏರುವ ವೇಳೆ ನದಿಗೆ ಉರುಳಿದ ಪರಿಣಾಮ 23 ಜನರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ರಾಜ್‌ಬರಿ ಜಿಲ್ಲೆಯಿಂದ ಹೊರಟಿದ್ದ ಬಸ್‌ ಬುಧವಾರ ಸಂಜೆ ಪದ್ಮಾ ನದಿಯ ಮೇಲೆ ಸಾಗುತ್ತಿದ್ದ ಫೆರಿಗೆ ಏರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಕೆಲವರು ಕಿಟಕಿಗಳ ಮೂಲಕ ಹೊರಬಂದು ಜೀವ ಉಳಿಸಿಕೊಂಡರೂ, ಬಹುತೇಕ ಪ್ರಯಾಣಿಕರು ಒಳಗೇ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ:

ರಕ್ಷಣಾ ಸಿಬ್ಬಂದಿ ಈಗಾಗಲೇ 23 ಮೃತದೇಹಗಳನ್ನು ಹೊರತೆಗೆದಿದ್ದು, ಇನ್ನೂ ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ತಕ್ಷಣ ಕಾರ್ಯಾಚರಣೆ ಆರಂಭಿಸಿದ ತಂಡಗಳು, ಕ್ರೇನ್ ಸಹಾಯದಿಂದ ಬಸ್‌ ಅನ್ನು ಮೇಲಕ್ಕೆತ್ತಿವೆ.

ರಾತ್ರಿ ಸಮಯದ ಅಡಚಣೆಗಳಿಂದ ಕೆಲಕಾಲ ಶೋಧ ಕಾರ್ಯ ಸ್ಥಗಿತಗೊಂಡಿದ್ದರೂ, ಗುರುವಾರ ಮತ್ತೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ ದಳ, ನೌಕಾಪಡೆ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ನಿಯೋಜನೆಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !