May 11, 2026
Monday, May 11, 2026
spot_img

ಇರಾನ್‌ನಿಂದ ಭಾರತಕ್ಕೆ ಅಡುಗೆ ಅನಿಲ ಹರಿವು: 8 ವರ್ಷಗಳ ಬಳಿಕ ‘LPG’ ಡೀಲ್ ಕುದುರಿಸಿದ IOC

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ರಾಜತಾಂತ್ರಿಕ ಸಂಘರ್ಷಗಳ ನಡುವೆಯೇ ಭಾರತದ ಇಂಧನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸುಮಾರು 8 ವರ್ಷಗಳ ಸುದೀರ್ಘ ವಿರಾಮದ ನಂತರ, ಭಾರತದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಇರಾನ್‌ನಿಂದ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಯಶಸ್ವಿಯಾಗಿ ಆಮದು ಮಾಡಿಕೊಂಡಿದೆ.

ಕೇವಲ IOC ಮಾತ್ರವಲ್ಲದೆ, ಸರ್ಕಾರಿ ಸ್ವಾಮ್ಯದ ಇತರ ದೈತ್ಯ ಕಂಪನಿಗಳಾದ BPCL ಮತ್ತು HPCL ಕೂಡ ಈ ಸಾಗಣೆಯಲ್ಲಿ ಪಾಲನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಈ ವ್ಯವಹಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಕೆರಳಿಸಲು ಒಂದು ರೋಚಕ ಕಾರಣವಿದೆ.

ಮಾರ್ಚ್ 17 ರಂದು ಹಾರ್ಮುಜ್ ಜಲಸಂಧಿಯನ್ನು ದಾಟುವಾಗ ‘ಸೀ ಬರ್ಡ್’ ಹೆಸರಿನ ಎಲ್‌ಪಿಜಿ ವಾಹಕ ಹಡಗು ತನ್ನ ಟ್ರಾನ್ಸ್‌ಪಾಂಡರ್ ಸಿಗ್ನಲ್‌ಗಳನ್ನು ಆಫ್ ಮಾಡಿತ್ತು. ಆರಂಭದಲ್ಲಿ ಚೀನಾಕ್ಕೆ ಹೋಗುವುದಾಗಿ ತೋರಿಸಿದ್ದ ಹಡಗು, ಅರಬ್ಬಿ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಮಂಗಳೂರು ಬಂದರಿನತ್ತ ಮುಖ ಮಾಡಿದೆ.

ಈ ಹಡಗಿನಲ್ಲಿ ಸುಮಾರು 43,000 ಟನ್ ಬ್ಯೂಟೇನ್ ಮತ್ತು ಪ್ರೊಪೇನ್ ಇದೆ. ಇದು ಇಡೀ ಭಾರತದ ಅರ್ಧ ದಿನದ ಎಲ್‌ಪಿಜಿ ಬೇಡಿಕೆಯನ್ನು ಪೂರೈಸುವಷ್ಟು ದೊಡ್ಡ ಪ್ರಮಾಣವಾಗಿದೆ.

ಇತ್ತೀಚೆಗಷ್ಟೇ ಅಮೆರಿಕವು ಇರಾನ್‌ನಿಂದ ತೈಲ ಉತ್ಪನ್ನಗಳನ್ನು ಖರೀದಿಸಲು ಭಾರತಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿದ ಬೆನ್ನಲ್ಲೇ ಈ ಖರೀದಿ ನಡೆದಿದೆ. ಅಷ್ಟೇ ಅಲ್ಲದೆ, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ ಎಂಬ ಇನ್ನೂ ಎರಡು ಹಡಗುಗಳ ಮೂಲಕ ಅನಿಲ ತರಿಸಿಕೊಳ್ಳಲು ಬಿಪಿಸಿಎಲ್ ಮಾತುಕತೆ ಅಂತಿಮ ಹಂತದಲ್ಲಿದೆ. ಇದು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !