May 21, 2026
Thursday, May 21, 2026
spot_img

ಅವ್ರ ವಿಕೆಟ್ ಸಿಕ್ಕಿದ್ರೆ ಏನಾದ್ರು ಮಾಡ್ಬಹುದಿತ್ತು: ಇಶಾನ್ ಕಿಶನ್ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೋಲು ಅನುಭವಿಸಿದ ಬಳಿಕ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಈ ಪಂದ್ಯದಲ್ಲಿ ಆರಂಭಿಕ ವಿಕೆಟ್‌ಗಳನ್ನು ಬೇಗ ಕಳೆದುಕೊಂಡದ್ದು ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 201 ರನ್ ಗಳಿಸಿದರೂ, ಆರಂಭದ ಕುಸಿತ ತಂಡದ ಮೇಲೆ ಒತ್ತಡ ತಂದಿತು. ಮೊದಲ ಕೆಲವು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡದ್ದು ದುಬಾರಿಯಾಯಿತು. ನಾವು ಆರಂಭದಲ್ಲಿ ಹೆಚ್ಚು ಜಾಗರೂಕರಾಗಿ ಆಡಬೇಕಿತ್ತು, ಎಂದು ಕಿಶನ್ ಹೇಳಿದರು.

ಇದನ್ನೂ ಓದಿ:

ಚಿನ್ನಸ್ವಾಮಿ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಾಗಿದ್ದರೂ, ಶಾಟ್ ಆಯ್ಕೆ ಸರಿಯಾಗಿರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು. ಎರಡನೇ ಇನ್ನಿಂಗ್ಸ್ ನೋಡಿದಾಗ ಬ್ಯಾಟಿಂಗ್ ಸುಲಭವಾಗಿತ್ತು. ನಾವು ಆರಂಭದಲ್ಲಿ ಬುದ್ಧಿವಂತಿಕೆಯಿಂದ ಆಡಬೇಕಿತ್ತು, ಎಂದರು.

ಇನ್ನು ವಿರಾಟ್ ಕೊಹ್ಲಿ ವಿಕೆಟ್‌ ಬೇಗ ಪಡೆಯಲು ಸಾಧ್ಯವಾಗದಿದ್ದು ಮತ್ತೊಂದು ದೊಡ್ಡ ಕಾರಣ ಎಂದು ಹೇಳಿದರು. ಕೊಹ್ಲಿ ಒಮ್ಮೆ ನೆಲೆಯೂರಿದರೆ ಅವರನ್ನು ತಡೆಯುವುದು ಕಷ್ಟ. ಅವರ ವಿಕೆಟ್ ಆರಂಭದಲ್ಲೇ ಸಿಕ್ಕಿದ್ದರೆ ಪಂದ್ಯ ಬದಲಾಯಿಸಬಹುದಿತ್ತು, ಎಂದು ಅಭಿಪ್ರಾಯಪಟ್ಟರು.

ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಬಲವಾಗಿ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಕಿಶನ್ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !