August 26, 2026
Wednesday, August 26, 2026
spot_img

ಜಾನಕಮ್ಮನ ಅಂತ್ಯಸಂಸ್ಕಾರಕ್ಕೆ ಉಚಿತ ನಿವೇಶನ, ಸ್ವಯಾರ್ಜಿತ ಸೈಟ್‌ ನೀಡುತ್ತೇನೆ ಎಂದ ಸಾರಾ ಮಹೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಾನಕೋಗಿಲೆ ಎಸ್‌. ಜಾನಕಿಯವರ ಅಂತಿಮ ಸಂಸ್ಕಾರ ಹಾಗೂ ಪಾರ್ಥಿವ ಶರೀರದ ಸಾರ್ವಜನಿಕ ದರುಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ. ಇತ್ತ ಮಾಜಿ ಸಚಿವ ಸಾ.ರಾ. ಮಹೇಶ್‌ ಮೈಸೂರಿನಲ್ಲಿ ಅಂತಿಮ ಸಂಸ್ಕಾರಕ್ಕೆ ಉಚಿತ ನಿವೇಶನ ನೀಡುತ್ತೇನೆ ಎಂದು ಹೇಳಿದ್ದಾರೆ.

ಜಾನಕಿ ಅಮ್ಮ ಅವರ ಅಂತ್ಯಸಂಸ್ಕಾರವನ್ನು ಮೈಸೂರಿನಲ್ಲಿಯೇ ಮಾಡುವುದಾದರೆ, ನನ್ನ ಸ್ವಯಾರ್ಜಿತ ಆಸ್ತಿಯಾಗಿರುವ ಮೈಸೂರಿನ ಆರ್.ಟಿ. ನಗರದಲ್ಲಿನ 60*40 ಅಳತೆಯ ಒಂದು ನಿವೇಶನವನ್ನು ಉಚಿತವಾಗಿ ನೀಡಲು ನಾನು ಸಿದ್ಧನಿದ್ದೇನೆ. ಜಾನಕಿ ಅವರ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರೆ ಆ ಜಾಗವನ್ನು ಅವರ ಹೆಸರಿನ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು. ಈ ಕುರಿತು ಈಗಾಗಲೇ ಮೈಸೂರು ಜಿಲ್ಲಾಡಳಿತಕ್ಕೂ ಅಧಿಕೃತ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.

ಇನ್ನೊಂದೆಡೆ, ಜಾನಕಿ ಅಮ್ಮ ಕೊನೆಯುಸಿರೆಳೆದ ಮೈಸೂರಿನ ಅಪೋಲೋ ಆಸ್ಪತ್ರೆಯ ಆವರಣದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ತುರ್ತು ಸಭೆ ಪ್ರಗತಿಯಲ್ಲಿದೆ. ನಾಳೆ ಅಪಾರ ಅಭಿಮಾನಿಗಳು ಮೈಸೂರಿಗೆ ಲಗ್ಗೆಯಿಡುವ ಕಾರಣ ತಯಾರಿ ನಡೆಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !